ಹೊಸದಿಲ್ಲಿ: ಮದುವೆ ನಿಶ್ಚಯವಾಗಿದ್ದ ಕೇತನ್ ಅಗರ್ವಾಲ್ ಎಂಬುವವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಸಿಯಾ ಗೋಯಲ್ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.

ತನಿಖೆಯ ಭಾಗವಾಗಿ ಪೊಲೀಸರು ಆಕೆಯನ್ನು ಪುಣೆಯಲ್ಲಿರುವ ಮಾರ್ಕೆಟ್ ಯಾರ್ಡ್ ನಿವಾಸಕ್ಕೆ ಕರೆತಂದಿದ್ದರು. ಈ ವೇಳೆ ಸುದ್ದಿ ಕವರ್ ಮಾಡಲು ನಿಂತಿದ್ದ ಮಾಧ್ಯಮದವರನ್ನು ನೋಡಿ ಸಿಯಾ ತಲೆಗೆ ಪಿಸ್ತೂಲು ಇಟ್ಟಂತೆ ಆಡಿದ್ದಾಳೆ. ಅಷ್ಟೇ ಅಲ್ಲ, ತನ್ನ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕ್ಯಾಮೆರಾಗಳ ಕಡೆಗೆ ತಿರುಗಿ ಅಶ್ಲೀಲವಾಗಿ ಸನ್ನೆ ಮಾಡಿದ್ದಾಳೆ!
ಸುದ್ದಿ ಸಂಸ್ಥೆ ಐಎಎನ್ಎಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಈ 17 ಸೆಕೆಂಡುಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಮುಖ ಮುಚ್ಚಿಕೊಂಡಿದ್ದರೂ ಆಕೆಯ ಕಣ್ಣುಗಳಲ್ಲಿ ಹಾಗೂ ನಡವಳಿಕೆಯಲ್ಲಿ ಕೊಂಚವೂ ಪಶ್ಚಾತ್ತಾಪ ಕಾಣಿಸುತ್ತಿಲ್ಲ. ಒಬ್ಬ ನಿರಪರಾಧಿಯನ್ನು ಕೊಂದ ಆರೋಪ ಹೊತ್ತಿರುವ ಯುವತಿಯ ಈ ಉದ್ಧಟತನದ ವೀಡಿಯೋ ನೋಡಿ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.





