ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಭೇಟಿ ನೀಡಿದ್ದು, ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.


ಈ ಭೇಟಿಯ ವೇಳೆ, ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿರುವ “ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ” ಎಂಬ ವಿಶೇಷ ಕೃತಿಯನ್ನು ಪೂಜ್ಯ ಹೆಗ್ಗಡೆಯವರಿಗೆ ಗೌರವಪೂರ್ವಕವಾಗಿ ಸಮರ್ಪಿಸಲಾಯಿತು.

ಪ್ರಸಿದ್ಧ ವೈದ್ಯ ಸಾಹಿತಿ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಸಂಪಾದಕತ್ವದಲ್ಲಿ, ಕರ್ನಾಟಕ ರಾಜ್ಯ ವೈದ್ಯ ಬರಹಗಾರರ ಬಳಗದ ಆಶ್ರಯದಲ್ಲಿ ಈ ಪುಸ್ತಕ ಇತ್ತೀಚಿಗಷ್ಟೇ ಬಿಡುಗಡೆಗೊಂಡಿತ್ತು. ವೈದ್ಯರ ಅನುಭವ ಹಾಗೂ ಸಾಹಿತ್ಯಿಕ ಚಿಂತನೆಗಳನ್ನು ಒಳಗೊಂಡ ಈ ಕೃತಿ ಸಾಹಿತ್ಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಪ್ರಶಂಸೆಗೆ ಪಾತ್ರವಾಗಿದೆ.
ಡಾ. ಅಣ್ಣಯ್ಯ ಕುಲಾಲ್ ಅವರೊಂದಿಗೆ ನಿವೃತ್ತ ಕಂದಾಯ ನಿರೀಕ್ಷಕ ಹೆಚ್. ಪದ್ಮಕುಮಾರ್, ಹರೀಶ್ ಕಾರಿಂಜ, ಕೇಶವ ಕುಲಾಲ್ ಚಾರ್ಮಾಡಿ, ಉಮೇಶ್ ಕುಲಾಲ್ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.








