ಉಜಿರೆ: ಕರಾವಳಿಯ ಜಾನಪದ ಕಲೆ ಹಾಗೂ ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಶೀರ್ವಾದದೊಂದಿಗೆ ಆರೋಹಣ ತಂಡವು ರೂಪಿಸಿರುವ “ಉಜಿರೆ ಪಿಲಿ ರಂಗ್ -2026” ಹುಲಿವೇಷ ತಂಡವು ಅಧಿಕೃತವಾಗಿ ಹೊರಹೊಮ್ಮಿದೆ.


ಜುಲೈ 12 ರಂದು ಉಜಿರೆಯ ಎಸ್.ಡಿ.ಎಮ್. ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ‘ರೈನಥಾನ್ -2026’ ಕಾರ್ಯಕ್ರಮದ ಮುಖ್ಯವೇದಿಕೆಯಲ್ಲಿ ಗಣ್ಯಾತಿಗಣ್ಯರು ಜ್ಯೋತಿ ಬೆಳಗಿಸಿ ತಂಡಕ್ಕೆ ಶುಭ ಹಾರೈಸಿದರು.
ಡಿ.ವೈ.ಎಸ್.ಪಿ ರೋಹಿಣಿ ಹಾಗೂ ಅಡಿಷನಲ್ ಎಸ್.ಪಿ ಅನಿಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಯುವ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹಾಗೂ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಉಪಸ್ಥಿತರಿದ್ದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ., ರಕ್ಷಿತ್ ಶಿವರಾಂ, ಪ್ರತಾಪಸಿಂಹ ನಾಯಕ್ ಸೇರಿದಂತೆ ಪ್ರಮುಖ ಪ್ರಮುಖರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿ ನಿರೂಪಣೆಯನ್ನು ನ್ಯಾಯವಾದಿ ಧನಂಜಯ ರಾವ್ ಬಿ.ಕೆ. ನಿರ್ವಹಿಸಿದರು.






