ಕಾಶಿಪಟ್ಣ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ಅಭಿವೃದ್ಧಿ ಸಮಿತಿ (ಎಸ್ಡಿಎಂಸಿ)ಯ ನೂತನ ಸದಸ್ಯರ ಆಯ್ಕೆ, ವಿದ್ಯಾರ್ಥಿಗಳಿಗೆ ಲ್ಯಾಂಡ್ ಟ್ರೇಡ್ ಸಂಸ್ಥೆಯಿಂದ ಸ್ಕ್ವಾಡ್ ಡ್ರೆಸ್ ವಿತರಣೆ, ಹಾಗೂ ಪೋಷಕ-ಶಿಕ್ಷಕ ಮಹಾಸಭೆ ಜರುಗಿತು.

ನೂತನ ಎಸ್ಡಿಎಂಸಿ ಸದಸ್ಯರ ಆಯ್ಕೆ:
ನೂತನ ವಾಗಿ ಐದು ಸದಸ್ಯರನ್ನು ಶಾಲೆಯ ಪ್ರಗತಿಗೆ ಮಾರ್ಗದರ್ಶನ ನೀಡಲು ನೂತನ ಎಸ್ಡಿಎಂಸಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸತೀಶ್ ನಾಯಕ್, ಸತೀಶ್, ಸಿದ್ದಿಕ್ ರೇಣುಕಾ, ಯೋಗಿಣಿ ಮುಖ್ಯ ಶಿಕ್ಷಕರ ಅಧ್ಯಕ್ಷತೆಯಲ್ಲಿ ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಪ್ರಮುಖರು ಸಕ್ರಿಯವಾಗಿ ಭಾಗವಹಿಸಿದರು. ಹೊಸ ಸಮಿತಿಯು ಶಾಲೆಯ ಮೂಲಸೌಕರ್ಯ, ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿತು.

ಲ್ಯಾಂಡ್ ಟ್ರೇಡ್ ಸ್ಕ್ವಾಡ್ ಡ್ರೆಸ್ ವಿತರಣೆ:
‘ಲ್ಯಾಂಡ್ ಟ್ರೇಡ್’ ಸಂಸ್ಥೆಯ ಆರ್ಥಿಕ ಸಹಕಾರದೊಂದಿಗೆ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕ್ವಾಡ್ ಡ್ರೆಸ್ಗಳನ್ನು ವಿತರಿಸಲಾಯಿತು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಇದು ಪ್ರೋತ್ಸಾಹ ನೀಡಲಿದೆ. ವಿದ್ಯಾರ್ಥಿಗಳು ಹೊಸ ಡ್ರೆಸ್ನಲ್ಲಿ ಉಲ್ಲಾಸಿತರಾಗಿ ಕಂಡುಬಂದರು.ಕಾಶೀಪಟ್ಣ ಆರೋಗ್ಯ ಇಲಾಖೆ ಉಮಾವತಿ ಇವರು ಮಕ್ಕಳ ಕಾಲು ಬಾಯಿ ರೋಗ ಜ್ವರ ಇದರ ಬಗ್ಗೆ ಕಾಳಜಿ ವಹಿಸಬೆಕು ಮಾಹಿತಿ ನೀಡಿದರು.ಪೋಷಕ-ಶಿಕ್ಷಕ ಮಹಾಸಭೆ:ಇದೇ ವೇದಿಕೆಯಲ್ಲಿ ಪೋಷಕ-ಶಿಕ್ಷಕ ಮಹಾಸಭೆಯೂ ನಡೆಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಶಾಲೆಯ ಸಮಸ್ಯೆಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲಾಯಿತು. ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು.ಶಾಲೆಯ ಮುಖ್ಯ ಶಿಕ್ಷಕರು, “ಪೋಷಕರು, ಶಿಕ್ಷಕರು ಮತ್ತು ಸಮುದಾಯದ ಸಹಭಾಗಿತ್ವವೇ ಶಾಲೆಯ ಯಶಸ್ಸಿಗೆ ಮೂಲಾಧಾರ. ಈ ಕಾರ್ಯಕ್ರಮಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ” ಎಂದು ಅಭಿಪ್ರಾಯಪಟ್ಟರು.ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಎಸ್ಡಿಎಂಸಿ ಹಾಗೂ ಪೋಷಕರು, ಗ್ರಾಮ ಮುಖ್ಯಸ್ಥರು ಮತ್ತು ಸಾರ್ವಜನಿಕರು ಹಾಜರಿದ್ದರು. ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.




