ಉಜಿರೆ: ಹಾಸನದ SK ಸ್ವಿಮ್ಮಿಂಗ್ ಸೆಂಟರ್ನಲ್ಲಿ (ಮಿಲೇನಿಯಮ್ ವರ್ಲ್ಡ್ ಸ್ಕೂಲ್) ನಡೆದ ರಾಜ್ಯ ಮಟ್ಟದ ‘ನಾನ್-ಮೆಡಲಿಸ್ಟ್’ ಈಜು ಸ್ಪರ್ಧೆಯಲ್ಲಿ ಉಜಿರೆಯ ಬೆನಕ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಂಚಿನ ಪದಕ (Bronze Medal) ಗೆದ್ದುಕೊಂಡಿದ್ದಾನೆ.

6.7 ವರ್ಷ ವಯಸ್ಸಿನ ಬೆನಕ, ಬ್ರೆಸ್ಟ್ ಸ್ಟ್ರೋಕ್ (Breaststroke) ವಿಭಾಗದಲ್ಲಿ ಕೇವಲ 25.50 ಸೆಕೆಂಡುಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾನೆ.


ಈತ ಉಜಿರೆಯ ಅಶ್ವಿನಿ ಹಾಗೂ ಪದ್ಮನಾಭ ದಂಪತಿಯ ಪುತ್ರ. ಉಜಿರೆಯ ಎಸ್ಡಿಎಂ ಎಜುಕೇಶನಲ್ ಸೊಸೈಟಿಯ (SDM Educational Society) ಎಸ್ಡಿಎಂ ಈಜು ಕೊಳದಲ್ಲಿ ತರಬೇತಿ ಪಡೆಯುತ್ತಿರುವ ಈತನಿಗೆ ತರಬೇತುದಾರರಾದ ಚರಣ್ (HOD), ವೀಕ್ಷಿತಾ ಮತ್ತು ಶೀನ್ ಮಾರ್ಗದರ್ಶನ ನೀಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ರಾಜ್ಯ ಮಟ್ಟದಲ್ಲಿ ಪದಕ ಗೆದ್ದು ಊರಿಗೆ ಕೀರ್ತಿ ತಂದ ಬಾಲಕನಿಗೆ ಸಾರ್ವಜನಿಕರಿಂದ ಹಾಗೂ ಸಂಸ್ಥೆಯ ಕಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.






