ಬೆಳ್ತಂಗಡಿ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನಾಲ್ಕೂರು ಸಮಿತಿ ಬೆಳ್ತಂಗಡಿ ಯಲ್ಲಿ ಸಮಾಲೋಚನಾ ಸಭೆ ನಡೆಯಿತು.



ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿರವರು ಕಸ್ತೂರಿ ರಂಗನ್ ವರದಿ ಮತ್ತು 7 ನೆ ಕರಡು ಅದಿಸೂಚನೆಯ ಪರಿಸರ ಸೂಕ್ಷ್ಮ ವಲಯ ಯೋಜನೆಯಿಂದ ಎದುರಗುವ ಸಮಸ್ಯೆಗಳು ಮತ್ತು ಬೇಡಿಕೆಯನ್ನು ಕಾರ್ಯಕರ್ತರಿಗೆ ತಿಳಿಸಿದರು.

ವೈಯಕ್ತಿಕ ಮತ್ತು ಸಂಘ ಸಂಸ್ಥೆ ಗಳ ಮೂಲಕ ಗ್ರಾಮ ಪಂಚಾಯತ್ ಗಳಿಗೆ ಆಕ್ಷೇಪನೆಪತ್ರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.


ಆಗಸ್ಟ್ 20 ರಂದು ಹೋರಾಟದ ರೂಪುರೆಷೆಯ ಸಭೆ ಸುಬ್ರಮಣ್ಯ ದಲ್ಲಿ ನಡೆಸಲು ತೀರ್ಮಾನಿಸಯಿತು
ಜಿಲ್ಲಾ ಪ್ರಮುಖರಾದ ದಾಮೋಧರ್ ಗುಂಡ್ಯ,ಮಿಲನ್ ಬಾಳಿಕಳ,ಮಾಧವ ಶಿರ್ಲಾಲು ,ಕರುಣಾಕರ ಹೆಗ್ಡೆ, ದಿನೇಶ್ P K, ವಿಜಯ ಕುಮಾರ್ ಜೈನ್,ಮತ್ತು ಜಿಲ್ಲಾ ಪ್ರಮುಖರು, ರೈತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.






