ಉಜಿರೆ : ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ (ರಿ )ಉಜಿರೆ ಹಾಗೂ ಮಹಿಳಾ ವೇದಿಕೆ ಮತ್ತು ಯುವ ವೇದಿಕೆ ಇದರ ಸಹಯೋಗದಲ್ಲಿ ವಾರ್ಷಿಕ ಮಹಾಸಭೆ ಇಲ್ಲಿನ ಶಾರದಾ ಮಂಟಪದಲ್ಲಿ ಆಗಸ್ಟ್ 9 ಭಾನುವಾರ ನಡೆಯಿತು.

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕೋಶಾಧಿಕಾರಿ ಯುವರಾಜ ಗೌಡ ಅನಾರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಾಲೂಕಿನ ನಮ್ಮ ಸಮಾಜದ ಜನರಿರುವ ಎಲ್ಲಾ ಗ್ರಾಮಗಳಲ್ಲಿ ಇಂತಹ ಮಾದರಿ ಕಾರ್ಯಕ್ರಮ ನಡೆಯಬೇಕು ಆ ಮೂಲಕ ಒಕ್ಕಲಿಗ ಜನಾಂಗ ಸಂಘಟಿತರಾಗಬೇಕು ಎಂದರಲ್ಲದೆ ತಾಲೂಕು ಸಂಘದಿಂದ ನಡೆಸಲ್ಪಡುವ ವಾಣಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಹಾಗೂ ಸಾಧನೆಯ ವಿವರವನ್ನು ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಾತೃ ಸಂಘ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ )ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಮಡಪ್ಪಾಡಿ ಮಾತನಾಡುತ್ತಾ ಜಿಲ್ಲೆಯಲ್ಲಿ ಇದು ಗ್ರಾಮ ಮಟ್ಟದಲ್ಲಿ ಅತ್ಯಂತ ವ್ಯವಸ್ಥಿತ ಕಾರ್ಯಕ್ರಮ ಎಂದರು.
ಮಕ್ಕಳಿಗೆ ಸಂಸ್ಕಾರ ನೀಡಬೇಕಾದ್ದು ಕುಟುಂಬ ಹಾಗೂ ತಂದೆ ತಾಯಿಯ ಆದ್ಯ ಕರ್ತವ್ಯ ಎಂದರಲ್ಲದೆ ಅಗತ್ಯ ಕೌಟುಂಬಿಕ ಕಾನೂನು ಸಲಹೆಗಳನ್ನು ನೀಡಿದರು. ಅಲ್ಲದೆ ಜಿಲ್ಲಾ ಮಾತೃ ಸಂಘದ ಧ್ಯೇಯೋದ್ದೇಶಗಳನ್ನು ಹಾಗೂ ಮುಂದಿನ ಯೋಜನೆಗಳನ್ನು ಸಭೆಗೆ ತಿಳಿಸಿದರು. ತಾಲೂಕು ಸಂಘಟನಾ ಕಾರ್ಯದರ್ಶಿ ಶ್ರೀ ಕೃಷ್ಣಪ್ಪಗೌಡ ಸವಣಾಲು ಇವರು ಭಾಗವಹಿಸಿ ಶುಭ ಹಾರೈಸಿದರು.
ಜಿಲ್ಲಾ ಯುವ ವೇದಿಕೆ ಕಾರ್ಯದರ್ಶಿ ಶ್ರೀ ಗಣೇಶ್ ಗೌಡ ಕಲಾಯಿ ಇವರು ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಬೆಳ್ತಂಗಡಿ ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಗೀತಾ ರಾಮಣ್ಣಗೌಡ ಇವರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕೆ ಸಂತದ ವ್ಯಕ್ತಪಡಿಸಿ ಮಹಿಳೆಯರು ಕೂಡ ವಿಚಾರವಂತರಾಗಬೇಕು ಎಂದು ಹೇಳಿದರು.
ತಾಲೂಕು ಸ್ಪಂದನ ಸೇವಾ ಸಂಘದ ಸಂಚಾಲಕರಾದ ಶ್ರೀ ಸೀತಾರಾಮ ಗೌಡ ಇವರು ಮಾತನಾಡುತ್ತಾ ಸ್ಪಂದನ ವೇದಿಕೆಯು ಕಳೆದ ಆರು ವರ್ಷಗಳಿಂದ ನಮ್ಮ ಸಮಾಜಕ್ಕೆ ನೀಡಿದ ಆರ್ಥಿಕ ಸಹಾಯಧನದ ಬಗ್ಗೆ ವಿವರಿಸಿದರೂ ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಶೇಖರ ಗೌಡ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಗ್ರಾಮ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಜಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗ್ರಾಮದ ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು ಉಜಿರೆ ಗ್ರಾಮದ ಕುಟುಂಬ ಒಂದಕ್ಕೆ ಆರ್ಥಿಕ ಸಹಾಯ ನೀಡಲಾಯಿತು ಕಾರ್ಯಕ್ರಮದ ಭೋಜನ ವ್ಯವಸ್ಥೆಗೆ ವಿಶೇಷ ಆರ್ಥಿಕ ಸಹಾಯ ನೀಡಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾಜ ಬಾಂಧವರಿಗಾಗಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಹಿಳಾ ವೇದಿಕೆ ಸದಸ್ಯರು ಜಾನಪದ ನೃತ್ಯ ಕಾರ್ಯಕ್ರಮ ಉತ್ತಮವಾಗಿ ನಡೆಸಿಕೊಟ್ಟರು.
ಗ್ರಾಮ ಸಮಿತಿಯ ಸಂಚಾಲಕರಾದ ಶ್ರೀ ಪ್ರಕಾಶ್ ಗೌಡ ಆಪ್ರಮೇಯ ಮತ್ತು ಧರ್ನಪ್ಪ ಗೌಡ ಧರಣಿ,ಉಪಾಧ್ಯಕ್ಷರಾದ ಶ್ರೀ ಆನಂದ ಡಿ,ಶ್ರೀ ದೇವಪ್ಪ ಗೌಡ ಶ್ರೀ ರಮೇಶ್ ಪೈಲಾರ್, ಶ್ರೀ ಶೀನಪ್ಪಗೌಡ, ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮಣಗೌಡ ಕೋಶಾಧಿಕಾರಿ ಶ್ರೀ ಉಮೇಶ್ ಗೌಡ ಜೊತೆ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಗೌಡ, ಯುವ ವೇದಿಕೆ ಅಧ್ಯಕ್ಷ ಶ್ರೀ ಉಮೇಶ್ ಗೌಡ ಕಾರ್ಯದರ್ಶಿ ಶ್ರೀ ಕುಶಾಲಪ್ಪಗೌಡ, ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಚಂದ್ರಕಾಂತ, ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಇತರರು ಉಪಸ್ಥಿತರಿದ್ದು ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.


ಶ್ರೀ ರಮೇಶ್ ಪೈಲಾರ್ ಮತ್ತು ಶ್ರೀಮತಿ ವಸಂತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು ಕುಮಾರಿ ಮನಸ್ವಿ ಮತ್ತು ಬಳಗ ಪ್ರಾರ್ಥನೆ ನಡೆಸಿಕೊಟ್ಟರು. ಸಂಚಾಲಕರಾದ ಶ್ರೀ ಪ್ರಕಾಶ್ ಗೌಡ ಆಪ್ರಮೇಯ ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ಆನಂದ ಡಿ ಇವರು ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯದರ್ಶಿ ಶ್ರೀ ಲಕ್ಷ್ಮಣಗೌಡ ಇವರು ವರದಿ ವಾಚಿಸಿದರು ಹಾಗೂ ಕೋಶಾಧಿಕಾರಿ ಶ್ರೀ ಉಮೇಶ್ ಗೌಡ ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಚಂದ್ರಕಾಂತ ವಂದಿಸಿದರು ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.






