ಕಡೂರು: ಕಡೂರು ಸರಸ್ವತಿಪುರ ವಲಯದ ಶ್ರೀ ಶನೇಶ್ವರಸ್ವಾಮಿ ಸಮುದಾಯ ಭವನ ಕಂಸಾಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಕಡೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಡೂರು ಸಂಯುಕ್ತಾಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಭಜನೋತ್ಸವ ಕಾರ್ಯಕ್ರಮ ನಡೆಯಿತು.
ಶ್ರೀ ಶ್ರೀ ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ವೈ ಎಚ್ ನೀಲಕಂಠಪ್ಪ ಸಭಾದ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕರಾದ ವೈ ಎಸ್ ವಿ ದತ್ತ ರವರು ಮಾತನಾಡುತ್ತಾ ಧಾರ್ಮಿಕ ಆಚರಣೆಗಳು ಮಾನವನ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರಮುಖ ಅಂಗಗಳಾಗಿವೆ. ಇವು ವ್ಯಕ್ತಿಗೆ ಶಿಸ್ತು, ಶಾಂತಿ ಮತ್ತು ಸಮುದಾಯದಲ್ಲಿ ಒಗ್ಗಟ್ಟನ್ನು ಮೂಡಿಸಲು ಸಹಾಯ ಮಾಡುತ್ತವೆ.
ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತಿದ್ದು ಸಮಾಜಕ್ಕೆ ಮಾದರಿಯಾಗಿದೆ ಎಂದು
ಶುಭ ಹಾರೈಸಿದರು.ರೂಪಾ ಸಂಗಡಿಗರು ಪ್ರಾರ್ಥನೆಯನ್ನು ಹಾಡಿದರು.ತಾಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ನಾಗವೇಣಿ ಎ ಜಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಶುಭ ಹಾರೈಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರರವರು ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ,ಭಜನಾ ಪರಿಷತ್ ಕಾರ್ಯಚಟುವಟಿಕೆಗಳ ಅನೇಕ ಮಾಹಿತಿ ನೀಡಿದರು. ಚಂದ್ರಪ್ಪ ಚನ್ನಾಪುರ,ಪ್ರೇಮ್ ಕುಮಾರ್,ಭಜನಾ ಪರಿಷತ್ ಅಧ್ಯಕ್ಷರಾದ ಗಂಗಾಧರ್ ನಾಯ್ಕ್ ಎಂ ಎಲ್,ಸರಸ್ವತಿಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿ ವಿ ಆನಂದ್,ಆಶಾ ತಮ್ಮಯ್ಯ, ಜಯಸ್ವಾಮಿ,ಮಹೇಶ್ವರಪ್ಪ,ಶ್ರೀನಿವಾಸ್,ರೇವಣ್ಣ,ಮಂಜಪ್ಪ,ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ಧನ್ಯವಾದವಿತ್ತರು.ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.




