ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪುತ್ತೂರು ಇದರ ನೇತೃತ್ವದಲ್ಲಿ,

ಮೈಂದಡ್ಕ ಶ್ರೀ ಮಹಮ್ಮಾಯಿ ಭಜನಾ ಮಂಡಳಿಯ ಶ್ರೀ ಪ್ರದೀಪ್ ಡಿ ರವರ ಅಧ್ಯಕ್ಷತೆಯಲ್ಲಿ ಭಜನಾ ಗುರುಗಳಾದ ಶ್ರೀ ನಾಗೇಶ್ ಬಿ ನೆರಿಯ ರವರ ಸಾರಥ್ಯದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ಪ್ರಾರಂಭವಾಯಿತು.

ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಭಜನೆ ಹಾಡುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ ಮತ್ತು ಭಿನ್ನಾಭಿಪ್ರಾಯಗಳು ದೂರವಾಗಿ ಒಗ್ಗಟ್ಟು ಮೂಡುತ್ತದೆ ಹಾಗೂ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ನಮ್ಮ ಸಂಸ್ಕೃತಿ, ದಾಸ ಸಾಹಿತ್ಯ ಹಾಗೂ ಧರ್ಮದ ಬಗ್ಗೆ ಅರಿವು ಮೂಡಿಸಲು ಇದು ಸಹಕಾರಿಯಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪಿ ಸಾಲ್ಯಾನ್ ಕೊಯ್ಯೂರು, ಪುತ್ತೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ಲೋಕೇಶ್ ಬೆತ್ತೋಡಿ,ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಶ್ರೀ ಸಂತೋಷ್ ಪಿ ಅಳಿಯೂರು,ವಲಯ ಮೇಲ್ವಿಚಾರಕರಾದ ಶ್ರೀ ಶಿವಪ್ಪ,ಭಜನಾ ಗುರುಗಳಾದ ಶ್ರೀಮತಿ ಮಾಲಿನಿ,ಹಿರಿಯರಾದ ಶ್ರೀ ಸೇಸಪ್ಪರವರು ವೇದಿಕೆಯಲ್ಲಿದ್ದರು.

ಶಾಂತಿವನ ಟ್ರಸ್ಟ್ ನ ಜ್ಞಾನ ದರ್ಶಿನಿ ಎಂಬ ವ್ಯಕ್ತಿತ್ವ ಮೌಲ್ಯಾಧಾರಿತ ಪುಸ್ತಕವನ್ನು ಎಲ್ಲರಿಗೂ ನೀಡಲಾಯಿತು.ಹಾಗೂ ಸ್ಥಳೀಯ ಪ್ರಮುಖರು ಭಜನಾ ಮಂಡಳಿ ಸದಸ್ಯರು ಬಾಗವಹಿಸಿದ್ದರು.ಭಜನಾ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನಡೆಯಿತು.





