ಉಜಿರೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 593ನೇ ಸೇವಾ ಯೋಜನೆಯ ಅಂಗವಾಗಿ, ಶ್ರೀಮತಿ ರತ್ನ ಎಂಬವರಿಗೆ ನಿರ್ಮಿಸಿಕೊಡುತ್ತಿರುವ ಟ್ರಸ್ಟ್ನ 35ನೇ ‘ಆಸರೆ’ ಮನೆ ಯೋಜನೆಯ ಭೂಮಿ ಪೂಜೆ ಕಾರ್ಯಕ್ರಮ ಇಂದು (ನವೆಂಬರ್ 15) ಉಜಿರೆಯ ಮೈತ್ರಿ ಹಾಸ್ಟೆಲ್ ಬಳಿಯ ಪೆರ್ಲ ರೋಡ್, ವೀರಮನಗೆ ಎಂಬಲ್ಲಿ ನೆರವೇರಿತು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಲಕ್ಷ್ಮಿ ಗ್ರೂಪ್ಸ್ ಮಾಲಕರಾದ ಮೋಹನ್ ಕುಮಾರ್ ಉಜಿರೆ, “ದೇವರು ಯಾವ ರೂಪದಲ್ಲಿದ್ದಾರೆ ಎಂದರೆ ಅದು ರಾಜ ಕೇಸರಿಯ ರೂಪದಲ್ಲಿದ್ದಾರೆ. ದೇವರು ಎಲ್ಲವನ್ನೂ ನೇರವಾಗಿ ಮಾಡಲು ಸಾಧ್ಯವಿಲ್ಲ; ಕೆಲವೊಂದು ಸಂದರ್ಭದಲ್ಲಿ ಇಂತಹ ಯುವಕರನ್ನು ಭೂಮಿಗೆ ಕಳುಹಿಸುತ್ತಾರೆ. ಬಡ ಕುಟುಂಬಕ್ಕೆ ಆಸರೆಯಾಗುವ ಮೂಲಕ ಇವರು ದೇವದೂತರಾಗಿದ್ದಾರೆ. ಯಾವುದೇ ಪ್ರಚಾರ ಅಥವಾ ಆಕಾಂಕ್ಷೆ ಬಯಸದೆ, ತಮ್ಮ ಕಿಂಚಿತ್ತು ಸಹಾಯ ಹಾಗೂ ದಾನಿಗಳ ಮುಖಾಂತರ ಆದಷ್ಟು ಬಡ ಕುಟುಂಬಗಳಿಗೆ ಆಸರೆಯಾಗುವ ಮೂಲಕ ರಾಜ ಕೇಸರಿ ಇಡೀ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ,” ಎಂದು ಶ್ಲಾಘಿಸಿದರು.

ಜಿಲ್ಲಾ ಪತ್ರಕರ್ತರಾದ ಭುವನೇಶ್ ಗೇರುಕಟ್ಟೆ ಮಾತನಾಡಿ, “ದೀಪಕ್ ಜಿ. ಅವರು ಬಡತನದಿಂದ ಹುಟ್ಟಿ ಬೆಳೆದವರು. ತಾವು ಕಷ್ಟದಲ್ಲಿದ್ದರೂ ತನ್ನವರೆಲ್ಲರನ್ನೂ ಒಟ್ಟುಗೂಡಿಸಿಕೊಂಡು, ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಾಜ ಸೇವೆಗೆ ಹೆಸರುವಾಸಿಯಾಗಿದ್ದಾರೆ. ದೀಪಕ್ ಜಿ. ಅವರು ಬೆಳೆಸಿದ ರಾಜ ಕೇಸರಿ ಸೇವಾ ಟ್ರಸ್ಟ್ ನಮ್ಮ ತಾಲೂಕಿಗೆ ಹೆಮ್ಮೆ,” ಎಂದು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಜಗದೀಶ್ ಲಾಯಿಲ್ ವಹಿಸಿದ್ದರು. ಶ್ರೀಮಂತ್ರ ದೇವತಾ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮನೋಜ್ ಕಟ್ಟೆ ದಿವ್ಯ ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳು ಹಾಗೂ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ವೈಭವ ಹಾರ್ಡ್ವೇರ್ ಮಾಲಕರಾದ ಸೀತಾರಾಮ್ ಶೆಟ್ಟಿ, ಕಾಂತರಬೆಟ್ಟು ಆರಂಬೋಡಿ ಎಸ್ಜಿಸಿ (SGC) ಮಡ್ ಬ್ಲಾಕ್ ಮಾಲಕರಾದ ಸುಕೀತ್ ಪೂಜಾರಿ, ಅನ್ನಪೂರ್ಣೇಶ್ವರಿ ರೋಡ್ ಲೈನ್ಸ್ ಮಾಲಕರಾದ ರವಿ ಎಸ್., ಬಂಟ್ವಾಳ ತಾಲೂಕು ರಾಜ ಕೇಸರಿ ಸೇವಾ ಟ್ರಸ್ಟ್ನ ಪ್ರಸಾದ್ ಕುಲಾಲ್, ಬಸವನ ಬಯಲು ನೆಲ್ಲಿಗುಡ್ಡೆ ಘಟಕದ ಅಧ್ಯಕ್ಷರಾದ ರವಿರಾಜ್ ಹಾಗೂ ಬೆಳ್ತಂಗಡಿ ರಾಜ ಕೇಸರಿ ಸೇವಾ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿ ದೇವರಾಜ್ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಸದಸ್ಯರಾದ ಸಂದೀಪ್, ವಿನೋದ್, ಪ್ರವೀಣ್ ಆಚಾರ್ಯ, ಸಂತೋಷ್, ಪುನೀತ್, ಲೋಹಿತ್, ದ್ಯಾಮಣ್ಣ, ಉದಯ್ ಕುಲಾಲ್, ನಿತೇಶ್, ಪ್ರಜ್ವಲ್, ಶೇಖರ್ ಕುಲಾಲ್, ಆನಂದ್ ಕುಲಾಲ್, ಪದ್ಮನಾಥ್ ಕುಲಾಲ್, ಹರೀಶ್ ಹಾಗೂ ಗೋಪಾಲ್ ಪಾಲ್ಗೊಂಡಿದ್ದರು.
ಟ್ರಸ್ಟ್ನ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು.





