ಉಜಿರೆ: ಅಭಿವೃದ್ಧಿಯ ಹರಿಕಾರ ಎಂದೇ ಖ್ಯಾತರಾಗಿರುವ ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜ ಅವರು ಭಕ್ತಿಯ ವಿಚಾರದಲ್ಲೂ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ.

ಉಜಿರೆ ಪಾರ ಎಂಬಲ್ಲಿರುವ ಶ್ರೀ ಪಾರ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನಕ್ಕೆ ಶಾಸಕರು ತಾವು ನೀಡಿದ್ದ ಭರವಸೆಯಂತೆ ಧನಸಹಾಯವನ್ನು ಹಸ್ತಾಂತರಿಸಿದ್ದಾರೆ. ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಶಾಸಕ ಹರೀಶ್ ಪೂಂಜ ಅವರು, ದೈವಸ್ಥಾನದ ಮೇಲ್ಚಾವಣಿ ಕಾಮಗಾರಿಗಾಗಿ ರೂ. 50,000/- ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದರು.


ತಮ್ಮ ನೆಚ್ಚಿನ ಶಾಸಕರ ಈ ಉದಾತ್ತ ಕಾರ್ಯಕ್ಕೆ ದೈವಸ್ಥಾನದ ಆಡಳಿತ ಸಮಿತಿ ಹಾಗೂ ಊರಿನ ಸಮಸ್ತ ಭಕ್ತಾದಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. “ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಶಾಸಕರು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ” ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.









