ಉಜಿರೆ: ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಉಜಿರೆಯ ನಿವೃತ್ತ ಯೋಧರಾದ
ಡಾ.ಗೋಪಾಲಕೃಷ್ಣ ಕಾಂಚೋಡು ಅವರಿಗೆ ನಿವೃತ್ತ ಸಾಧಕ ಯೋಧ ಪ್ರಶಸ್ತಿಯನ್ನು ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿಯವರು ಪ್ರದಾನ ಮಾಡಿದರು.


ಈ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಮೊದಲಿಗರು ಡಾ.ಗೋಪಾಲಕೃಷ್ಣ ಕಾಂಚೋಡು. ಆ ಪ್ರಯುಕ್ತ ಅವರನ್ನು ಉಜಿರೆಯ ಬೆನಕ ಹೆಲ್ತ್ ಸೆಂಟರ್ ವತಿಯಿಂದ ದಿನಾಂಕ 23.03.2026 ರಂದು ಆಸ್ಪತ್ರೆಯ
ಆವರಣದಲ್ಲಿ ವೈದ್ರಕೀಯ ನಿರ್ದೇಶಕರಾದ ಡಾ ಗೋಪಾಲಕೃಷ್ಣ ದಂಪತಿಗಳು ಶಾಲು ಹೊದಿಸಿ , ಫಲಪುಷ್ಪ ಮತ್ತು ನೆನಪಿನ ಕಾಣಿಕೆಯಿತ್ತು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಾ. ಗೋಪಾಲಕೃಷ್ಣ ಕೆ ಇವರು ಮಾತನಾಡುತ್ತಾ ಸೈನಿಕರು ನಿವೃತ್ತರಾದರೂ
ದೇಶದ ಆಸ್ತಿಯಾಗಿದ್ದಾರೆ . ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ನಿವೃತ್ತ ಸಾಧಕ ಯೋಧ ಪ್ರಶಸ್ತಿಗೆ ಭಾಜನರಾದ ಗೋಪಾಲಕೃಷ್ಣ ಕಾಂಚೋಡು ಅವರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ ಮತ್ತು ಅವರ ಸೇವೆ ನಮ್ಮೆಲ್ಲರಿಗೂ ಪ್ರೇರೇಪಣೆಯಾಗಲಿ ಎಂದು ಆಶಿಸಿದರು .


ಸನ್ಮಾನಿತರಾದ ಡಾ. ಗೋಪಾಲಕೃಷ್ಣ ಕಾಂಚೋಡು ಅವರು ಮಾತನಾಡುತ್ತ ಜೀವನದಲ್ಲಿ ಯಾವುದೇ ಸಾಧನೆ ಮಾಡುವಲ್ಲಿ ನಮ್ಮ ಆಯ್ಕೆ ಸವಾಲು ಎದುರಿಸುವ ಶಕ್ತಿ ಮತ್ತು ಸಂದರ್ಭದೊಂದಿಗೆ ಬದಲಾವಣೆ ಬಹು ಮುಖ್ಯವಾಗಿರುತ್ತದೆ .

ಅಂಥವರು ಯಾವುದೇ ಸಾಧನೆ ಮಾಡಲು ಸಾಧ್ಯ . ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ ಅವರಲ್ಲಿ ಈ ಮೂರು ಗುಣಗಳು ಮೈಗೊಂಡಿವೆ. ಹಾಗಾಗಿ ಉಜಿರೆಯಂಥ ಗ್ರಾಮೀಣ ಪ್ರದೇಶದಲ್ಲಿ ಇಂಥ ದೊಡ್ಡ ಆಸ್ಪತ್ರೆ ಕಟ್ಟಲು ಸಾಧ್ಯವಾಯಿತೆಂದು ಹೇಳುತ್ತ ಅವರ ಸಿಬ್ಬಂದಿಗಳಲ್ಲೂ ನಾನು ಇವುಗಳನ್ನು ಗುರುತಿಸಿದ್ದೇವೆ ಎಂದು ಪ್ರಶಂಸಿಸಿ , ಬೆನಕ ಆಸ್ಪತ್ರೆ ಇನ್ನಷ್ಟು ಯಶಸ್ಸು ಸಾಧಿಸಲೆಂದು
ಶುಭ ಹಾರೈಸಿದರು . ಡಾ. ಭಾರತಿ ಜಿ.ಕೆ ಇವರು ಧನ್ಯವಾದ ಅರ್ಪಿಸಿದ ಈ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಆಸ್ಪತ್ರೆಯ P R O ಎಸ್ ಜಿ ಭಟ್ ಸ್ವಾಗತಿಸಿ ನಿರೂಪಣೆಗೈದರು .





