ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2026ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವದ ದಿನಾಂಕಗಳು ನಿಗದಿಯಾಗಿದ್ದು, ಏಪ್ರಿಲ್ 13ರಿಂದ ಏಪ್ರಿಲ್ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.



ಕ್ಷೇತ್ರದ ವತಿಯಿಂದ ಬಿಡುಗಡೆ ಮಾಡಲಾದ ಅಧಿಕೃತ ಆಮಂತ್ರಣ ಪತ್ರಿಕೆಯ ಸಂಪೂರ್ಣ ವಿವರ ಇಲ್ಲಿದೆ:
13-04-2026 ಸೋಮವಾರ ರಾತ್ರಿ 8:30 ರಿಂದ ಓಲೆ ಬರೆಯುವುದು, 14-04-2026 ಮಂಗಳವಾರ ಸಂಜೆ 6:00 ಗಂಟೆಗೆ ಪಯ್ಯೋಳಿ ಹೋಗುವುದು, ರಾತ್ರಿ 7:30ಕ್ಕೆ ಧ್ವಜಾರೋಹಣ, ರಾತ್ರಿ 10:00 ಗಂಟೆಗೆ ಧರ್ಮದೈವಗಳ ಭಂಡಾರ ಹೊರಡುವುದು, 15-04-2026 ಬುಧವಾರ ರಾತ್ರಿ 10:00 ಗಂಟೆಯ ನಂತರ ಧರ್ಮದೈವಗಳ ನೇಮ,
16-04-2026 ಗುರುವಾರ ರಾತ್ರಿ 8:00 ಗಂಟೆಯಿಂದ ಅಣ್ಣಪ್ಪ ನೇಮ, ರಾತ್ರಿ 10:30ಕ್ಕೆ ಬಯಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ರಜತ ಲಾಲಕಿಯಲ್ಲಿ ಹೊಸಕಟ್ಟೆಗೆ, 17-04-2026 ಶುಕ್ರವಾರ ಬೆಳಿಗ್ಗೆ ರಥೋತ್ಸವ, ರಾತ್ರಿ 8:30ರ ನಂತರ ಉತ್ಸವ ಪ್ರಾರಂಭ,ಕಂಚಿಮಾರು ಕಟ್ಟೆ ಉತ್ಸವ, ನಂದಿಲಾಲಕಿಯಲ್ಲಿ ಕಂಚಿಮಾರುಕಟ್ಟೆಗೆ, 18-04-2026 ಶನಿವಾರ ಬೆಳಿಗ್ಗೆ ರಥೋತ್ಸವ, ರಾತ್ರಿ 8:30 ಗಂಟೆಯ ನಂತರ ಲಲಿತೋದ್ಯಾನ ಉತ್ಸವ ಪ್ರಾರಂಭ, 19-04-2026 ಭಾನುವಾರ ಬೆಳಿಗ್ಗೆ ರಥೋತ್ಸವ, ರಾತ್ರಿ 8:30 ಗಂಟೆಯ ನಂತರ ಕೆರೆಕಟ್ಟೆ ಉತ್ಸವ, 20-04-2026 ಸೋಮವಾರ ಬೆಳಿಗ್ಗೆ ರಥೋತ್ಸವ, ರಾತ್ರಿ 8:30 ಗಂಟೆಯ ನಂತರ ಚಂದ್ರಮಂಡಲ ಮತ್ತು ಗೌರಿಮಾರುಕಟ್ಟೆ ಉತ್ಸವ, 21-04-2026 ಮಂಗಳವಾರ ಬೆಳಿಗ್ಗೆ ರಥೋತ್ಸವ, ದರ್ಶನ ಬಲಿ, ಬೆಳಗ್ಗೆ 9:0 0 ಗಂಟೆಯ ನಂತರ ದೇವರ ದರ್ಶನ,
ರಾತ್ರಿ 8:30 ಗಂಟೆಯ ನಂತರ ಬ್ರಹ್ಮರಥೋತ್ಸವ ಮತ್ತು ಭೂತಬಲಿ 22-04-2026 ಬುಧವಾರ ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ‘ಅವಭೃತ’ ದರ್ಶನ ಬಲಿ ಮತ್ತು ಧ್ವಜಾಅವರೋಹಣ, 23-04-2026 ಗುರುವಾರ ರಾತ್ರಿ 8:30 ರಿಂದ ಧೂಳ ಬಲಿ ಉತ್ಸವ ನಡೆಯಲಿದೆ.


ಏಪ್ರಿಲ್ 17ರಿಂದ ಏಪ್ರಿಲ್ 22ರವರೆಗೆ ಬೆಳಿಗ್ಗೆ 8:30ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಸಂಜೆ 5:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಮಾತ್ರ ಭಕ್ತಾದಿಗಳನ್ನು ಗರ್ಭಗುಡಿಯ ಆವರಣಕ್ಕೆ ಬಿಡಲಾಗುವುದು ಎಂದು ದೇವಳ ಪಾರುಪತ್ಯಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








