ಬೆಳ್ತಂಗಡಿ: ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಇಂಡಿಯನ್ ನಾಲೆಡ್ಜ್ ಸಿಸ್ಟಮ್ ಅವರು 2025ರಲ್ಲಿ ನಡೆಸಿದ ಸಂಸ್ಕೃತ ಒಲಂಪಿಯಾಡ್ ನಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಮೌಲ್ಯ ನಾಯಕ್ ಸ್ವರ್ಣ ಪದಕ ಬಹುಮಾನ ಪಡೆದಿದ್ದಾರೆ.



ಇವರು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಬಾಲಚಂದ್ರ ನಾಯಕ್ ಹಾಗೂ ಲಲಿತಾ ನಾಯಕ್ ದಂಪತಿಯ ಪುತ್ರಿ.
ಇವರನ್ನು ಆಡಳಿತ ಮಂಡಳಿ , ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಹಾಗೂ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಅಭಿನಂದಿಸಿದ್ದಾರೆ.







