ಬೆಳ್ತಂಗಡಿ: ಉಡುಪಿಯಲ್ಲಿ ಇತ್ತೀಚೆಗೆ ನಡೆದ ಪಶ್ಚಿಮ ವಲಯದ 8 ನೇ ಪೋಲಿಸ್ ಕರ್ತವ್ಯ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸ್ ಸಿಬ್ಬಂದಿಯೊಬ್ಬರು ಸೈಬರ್ ಹಾಗೂ ತಾಂತ್ರಿಕ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇಲಾಖೆಗೆ ಹೆಮ್ಮೆ ತಂದಿದ್ದಾರೆ.

ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಉಡುಪಿಯಲ್ಲಿ ಪಶ್ಚಿಮ ವಲಯ ಮಟ್ಟದ 8 ನೇ ಪೋಲಿಸ್ ಕರ್ತವ್ಯ ಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಕೂಟದ ಭಾಗವಾಗಿ ನಡೆದ ‘ಪ್ರೋಗ್ರಾಮಿಂಗ್ ಸಾಮರ್ಥ್ಯ ಸ್ಪರ್ಧೆ’ಯಲ್ಲಿ (Programming Ability Competition) ಪುಂಜಾಲಕಟ್ಟೆ ಪೋಲಿಸ್ ಠಾಣೆಯ ಸಿಪಿಸಿ-490 ಪ್ರಸನ್ನ ಕುಮಾರ್ ಅವರು ಭಾಗವಹಿಸಿ, ತಮ್ಮ ಅತ್ಯುತ್ತಮ ತಾಂತ್ರಿಕ ಕೌಶಲ್ಯ ಪ್ರದರ್ಶಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.








