ಬೆಳ್ತಂಗಡಿ: ಉದಯ ಪೂಜಾರಿ ಬಳ್ಳಾಲ್ಬಾಗ್ ಅವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ‘ಬಿರುವೆರ್ ಕುಡ್ಲ’ ಬೆಳ್ತಂಗಡಿ ಘಟಕವು ತನ್ನ 52ನೇ ಸೇವಾ ಯೋಜನೆಯ ಮೂಲಕ ಮಾನವೀಯತೆ ಮೆರೆದಿದೆ. ತಾಲೂಕಿನ ಪಡಂಗಡಿ ಗ್ರಾಮದ ಗರ್ಡಾಡಿ ನಿವಾಸಿಯಾದ ಪುಟ್ಟ ಬಾಲಕಿ ಪ್ರಜ್ಞಾ ಕೆ. ಅವರ ವೈದ್ಯಕೀಯ ಚಿಕಿತ್ಸೆಗೆ ಸಂಘಟನೆಯ ವತಿಯಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

ಸೇವಾ ಮನೋಭಾವಕ್ಕೆ ಹೆಸರಾಗಿರುವ ಬಿರುವೆರ್ ಕುಡ್ಲ ಘಟಕವು ತಕ್ಷಣ ಸ್ಪಂದಿಸಿ, ತನ್ನ 52ನೇ ಸೇವಾ ಯೋಜನೆಯಡಿ ₹15,000 ಮೊತ್ತದ ಧನಸಹಾಯವನ್ನು ನೀಡಿದೆ. ಈ ಮೊತ್ತವನ್ನು ಸಂಘಟನೆಯ ಸದಸ್ಯರಾದ ವಿನೋದ್ ಶೆಣೈ ಮದ್ದಡ್ಕ ಅವರು ಪ್ರಾಯೋಜಿಸುವ ಮೂಲಕ ಮಗುವಿನ ಚಿಕಿತ್ಸೆಗೆ ಆಸರೆಯಾಗಿದ್ದಾರೆ.


ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ರಾಜೇಶ್ ಕೋಟ್ಯಾನ್ ಉಜಿರೆ, ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಸ್ನೇಕ್ ಅಶೋಕ್ ಬೆಳ್ತಂಗಡಿ,ರಾಜೇಂದ್ರ ಗರ್ಡಾಡಿ ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಮದ್ದಡ್ಕ ಉಪಸ್ಥಿತರಿದ್ದರು.

ಧನ ಸಹಾಯ ನೀಡುವವರು ಈ ಕೆಳಗಿನ ಖಾತೆ ಸಂಖ್ಯೆ ಗೆ ನೀಡಿ ಸಹಕರಿಸಿ:
PRAJNA K.( MINOR)
Bank: Canara Bank
Branch: Guruvayanakere
A/C No: 110299280804
IFSC Code: CNRB0006423



