ಬೆಳ್ತಂಗಡಿ : ಬೆಳ್ತಂಗಡಿ ತಾಲ್ಲೂಕಿನ ವಿವಿಧೆಡೆ ಮೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳು ಹಾಗೂ ರಸ್ತೆ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 9 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.


110/33/11ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಬೆಳ್ತಂಗಡಿ 33/11ಕೆವಿ ವಿದ್ಯುತ್
ಉಪಕೇಂದ್ರಕ್ಕೆ 33ಕೆವಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಾಗೂ ಹೊಸ 11ಕೆವಿ ಲಿಂಕ್ ಲೈನಿನ ಕಾಮಗಾರಿ, ರಸ್ತೆ ಅಗಲೀಕರಣ ಸಂಬಂಧ ರಸ್ತೆ ಬದಿಯಲ್ಲಿರುವ ಕಂಬಗಳ ಸ್ಥಳಾಂತರ ಕಾಮಗಾರಿ ಹಾಗೂ ವಿದ್ಯುತ್ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ,


11ಕೆವಿ ಫೀಡರುಗಳಾದ ಕೊಲ್ಲಿ, ಬಂಗಾಡಿ, ಕೊಯ್ಯರು, ಉಜಿರೆ, ಬೆಳಾಲು, ಲಾಯಿಲ, ಕುವೆಟ್ಟು, ಗೇರುಕಟ್ಟೆ, ಸೋಣಂದೂರು, ಮಡಂತ್ಯಾರು, ಪಡಂಗಡಿ, ಬಳ್ಳಮಂಜ ಫೀಡರುಗಳಲ್ಲಿ ಹಾಗೂ ಧರ್ಮಸ್ಥಳ 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಧಮಸ್ಥಳ ಟೆಂಪಲ್, ಕನ್ಯಾಡಿ, ಪುದುವೆಟ್ಟು, ಅರಸಿನಮಕ್ಕಿ, ನಿಡ್ಲೆ, ಪಟ್ರಮೆ ಫೀಡರುಗಳಲ್ಲಿ ಏ.9 ರಂದು ಬೆಳಿಗ್ಗೆ
ಗಂಟೆ: 10.00ರಿಂದ ಸಂಜೆ ಗಂಟೆ : 5.30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಇಲಾಖೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




