ಬಂಟ್ವಾಳ : ತಾಲೂಕಿನ ಅಲ್ಲಿಪಾದೆ ಗ್ರಾಮದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.


ಅಲ್ಲಿಪಾದೆಯ ಅನೇಜ ಛಾಯ ದಂಪತಿಯ ಪುತ್ರಿ ಅರ್ನಿಕಾ (5) ಮೃತಪಟ್ಟ ದುರ್ದೈವಿ. ಈಕೆ ಬಂಟ್ವಾಳದ ದೇವಳ ಶಾಲೆಯ ಯುಕೆಜಿ (UKG) ವಿದ್ಯಾರ್ಥಿನಿಯಾಗಿದ್ದಳು.

ಮೂಲಗಳ ಪ್ರಕಾರ, ಅರ್ನಿಕಾ ಕಳೆದ ಶುಕ್ರವಾರ ಎಂದಿನಂತೆ ಶಾಲೆಗೆ ತೆರಳಿದ್ದಳು. ಶನಿವಾರ ಶಾಲೆಗೆ ರಜೆ ಇದ್ದು, ಬಳಿಕ ಭಾನುವಾರ ಆಕೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.





