ಬೆಳ್ತಂಗಡಿ: ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಲು ಹೊಸದೊಂದು ವಿಭಿನ್ನ ಕಥಾಹಂದರದ ಚಿತ್ರ ಸದ್ದಿಲ್ಲದೆ ಸಜ್ಜಾಗುತ್ತಿದೆ.


ಎನ್.ಜಿ. ಕ್ರಿಯೇಶನ್ ಮತ್ತು ನವರಂಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ, ವಾಗೀಶ್ ವಿ. ತುಂಬೆತಡ್ಕ ಅವರ ನಿರ್ಮಾಣದ ಹಾಗೂ ನಿರಂಜನ್ ಗೌಡ ಗುರುವಾಯನಕೆರೆ ಅವರ ರಚನೆ ಮತ್ತು ನಿರ್ದೇಶನದ ನೂತನ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ಜೂನ್ 14, 2026ರ ಭಾನುವಾರದಂದು ಮೈರಲಿಕೆ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಅರ್ಚಕರಾದ ಪ್ರಸನ್ನ ಭಟ್ ಮತ್ತು ಗುರು ಭಟ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಮುಹೂರ್ತ ಮುಗಿಯುತ್ತಿದ್ದಂತೆ ಚಿತ್ರತಂಡವು ಉತ್ಸಾಹದಿಂದ ಚಿತ್ರೀಕರಣವನ್ನು ಮುಂದುವರಿಸಿದೆ.

ಈ ಚಿತ್ರದ ಪ್ರಮುಖ ಆಕರ್ಷಣೆಯೇ ಇದರ ಕಥಾವಸ್ತು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಯಾರಿಗೂ ತಿಳಿಯದಂತೆ ತೆರೆಮರೆಯಲ್ಲಿ ನಡೆಯುತ್ತಿರುವ ಅತ್ಯಂತ ಅಪಾಯಕಾರಿ ಕೆಲಸಗಳು ಹಾಗೂ ರಹಸ್ಯ ಜಾಲದ ಸುತ್ತ ಈ ಸಿನಿಮಾ ಸಾಗಲಿದೆ. ಈ ಕಥೆಯಲ್ಲಿ ಚಲನಚಿತ್ರ ನಟ ಚಂದ್ರಹಾಸ ಶೆಟ್ಟಿ ಮಾಣಿ , ವಿಷ್ಣು ಕಲಾವಿದೆರ್ ಮದ್ದಡ್ಕ, ಸಿಂಗಾರ ಕಲಾವಿದೆರ್ ಗುರುವಾಯನಕೆರೆ, ಗಯಪದ ಕಲಾವಿದೆರ್ ಉಬಾರ್ ಹಾಗೂ ಇತರ ಕಲಾವಿದರು ನಟಿಸಲಿದ್ದಾರೆ.





