ವೇಣೂರು: ಮರೋಡಿ ಪೊಸರಡ್ಕದ ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಹಾಗೂ ಬ್ರಹ್ಮಬೈದರ್ಕಳ ಗರಡಿಯಲ್ಲಿ ಏಪ್ರಿಲ್ 28ರಿಂದ ಐತಿಹಾಸಿಕ ಪುನರ್ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಜರುಗಲಿದೆ. ಈ ಶುಭ ಸಂದರ್ಭದ ಹಿನ್ನೆಲೆಯಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಭವ್ಯ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು.
20 ಕ್ವಿಂಟಾಲ್ ಬೆಳ್ತಿಗೆ ಅಕ್ಕಿ, ಒಂದು ಕ್ವಿಂಟಾಲ್ ಬೆಲ್ಲ, ಸಕ್ಕರೆ ಸೇರಿದಂತೆ 7೭ ಕ್ವಿಂಟಾಲ್ ವಿವಿಧ ತರಕಾರಿಗಳನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ ಶ್ರೀ ಕ್ಷೇತ್ರ ಪೊಸರಡ್ಕಕ್ಕೆ ಸಾಗಿಸಲಾಯಿತು.







