ಬೆಳ್ತಂಗಡಿ: ಗುರುವಾಯನಕೆರೆ ಪ್ರೌಢ ಶಾಲೆಯ ವಿದ್ಯಾರ್ಥಿ ಪಿಲಿಚಂಡಿಕಲ್ಲು ಸರಕಾರಿ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಅಬ್ದುಲ್ ಹಕೀಂ ಶಾಫಿ ಮತ್ತು ಝೀನತ್ ದಂಪತಿ ಪುತ್ರ.
ಮಹಮ್ಮದ್ ಶಹಝಾದ್ 625 ರಲ್ಲಿ 616 ಅಂಕಗಳನ್ನು ಪಡೆಯುವ ಮೂಲಕ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದ. ವಿದ್ಯಾರ್ಥಿಯ ಮನೆಗೆ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಕೆ ಆಲಿಹಬ್ಬ, ರಿಯಾಜ್ ಎಸ್ ಕೆ ಉದ್ಯಮಿಗಳಾದ ಶಂಸುದ್ದೀನ್ ಐಜಿ ಸೌದಿ ಅರೇಬಿಯಾ, ಪ್ರಮುಖರಾದ ಹೈದರ್ ಸುನ್ನತ್ಗೆರೆ, ಅಬ್ಬಾಸ್, ಅಬ್ದುಲ್ ರೆಹಮಾನ್, ಅಬ್ಬಾಸ್ ಬೆಳ್ತಂಗಡಿ, ಹನೀಫ್ ಸಿಎಂ, ಯುನಸ್ ಆಲಿ, ಅಶ್ರಫ್ ಎಸ್ ಕೆ ಗುರುವಾಯನಕೆರೆ ಉಪಸ್ಥಿತರಿದ್ದರು.







