ಉಜಿರೆ : ಇಲ್ಲಿನ ಓಡಲ ಚಾಮುಂಡಿ ನಗರದ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಜರುಗಿದ ಪ್ರತಿಷ್ಠಾ ವರ್ಧಂತ್ಯುತ್ಸವದ ಪುಣ್ಯ ಸಂದರ್ಭದಲ್ಲಿ, ದೈವದ ಮಹಿಮೆಯನ್ನು ಸಾರುವ ‘ವ್ಯಾಘ್ರ ಚಾಮುಂಡಿ ಭಕ್ತಿಗೀತೆ’ಯನ್ನು ಲೋಕಾರ್ಪಣೆಗೊಳಿಸಲಾಯಿತು. ವೇ.ಮೂ. ಪಿ.ರಾಜಗೋಪಾಲ ಯಡಪಡಿತ್ತಾಯ ಅವರು ಭಕ್ತಿಗೀತೆಯನ್ನು ಬಿಡುಗಡೆ ಗೊಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್. ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಉಪಾಧ್ಯಕ್ಷ ಹರೀಶ್ ಕಾವ, ಕಾರ್ಯದರ್ಶಿ ಪರಮೇಶ್ವರ, ಟ್ರಸ್ಟಿಗಳಾದ ಶ್ರೀನಿವಾಸ ಗೌಡ, ವಿದ್ಯಾ ಕುಮಾರ್ ಕಾಂಚೋಡು ಇತರರು ಉಪಸ್ಥಿತರಿದ್ದರು. ಸಂಗೀತ ಲೋಕ ಚಾನಲ್ ನಿರ್ದೇಶಕ ಮನು ಉಜಿರೆ, ಊರಿನ ಭಕ್ತರು ಪಾಲ್ಗೊಂಡಿದ್ದರು.
ಎಸ್ ಆರ್ ಕೆ. ಕ್ರೀಯೆಷನ್ ಸಂಗೀತ ಲೋಕ ನಿರ್ಮಿಸಿದ ವ್ಯಾಘ್ರ ಚಾಮುಂಡಿ ದೈವ ಭಕ್ತಿ ಗೀತೆ ಸಂಗೀತ ಸಂಯೋಜನೆ,ಗೀತೆ ರಚನೆ ಮನು ಉಜಿರೆ ಸಂಕಲನ ಪೃಥ್ವಿ ರಾಜ್ ಶೆಟ್ಟಿ ಉಜಿರೆ,ನಿರ್ಮಾಣ ಸಹಕಾರ ನ್ಯೂ ಶ್ರೀ ಮಾತಾ ಎಂಟರ್ಪ್ರೈಸಸ್ ಉಂಡ್ಯಾಪು ಸಹಕರಿಸಿದರು.







