ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಅಂಗನವಾಡಿ ಕೇಂದ್ರ ಕಾರಿಂಜ ಉರುವಾಲು ಬೆಳ್ತಂಗಡಿ, ಪಾರಾದೀಪ್ ಫಾಸ್ಫೇಟ್ ಲಿಮಿಟೆಡ್ ಮಂಗಳೂರು ಘಟಕ ಪಣಂಬೂರು ಇದರ ಸಿ.ಎಸ್.ಆರ್ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಈಶ್ವರ ಭಟ್ ಮಾಯಿಲ್ತೋಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಗಿರೀಶ್ ಎಸ್. ಮುಖ್ಯ ಉತ್ಪಾದನಾಧಿಕಾರಿ ಮಾತನಾಡಿ ಸಿ.ಎಸ್.ಆರ್ ಅನುದಾನದಲ್ಲಿ ನಮ್ಮ ಕಂಪನಿಯಿಂದ ಹಲವಾರು ಕಡೆಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಬಂದಿದೆ.ಅಕ್ಷರ ಮಿತ್ರ ಯೋಜನೆಯಡಿಯಲ್ಲಿ ಕಾರಿಂಜಕ್ಕೆ ಕೂಡ ನಮ್ಮ ಕಂಪನಿಯಿಂದ ಹೊಸದಾದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಡಾ ಯೋಗೀಶ್ ಜೆ.ಜಿ.ಯಂ- ವೈದ್ಯಕೀಯ ವಿಭಾಗ, ವಿವೇಕ್ ಕೋಟ್ಯಾನ್ ಸೀನಿಯರ್ ಆಫೀಸರ್-ಸಿ.ಎಸ್.ಆರ್ ವಿಭಾಗ, ರೋಷನ್ ಆಫೀಸರ್ ಹೆಚ್,ಆರ್ ವಿಭಾಗ,
ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಹಾಗೂ ಊರವರ ಸಹಕಾರದೊಂದಿಗೆ ವೇದಿಕೆಯಲ್ಲಿ ಪಾರಾದೀಪ್ ಕಂಪೆನಿಯ ಉತ್ಪಾದನಾಕಾರಿ ಗಿರೀಶ್ ಎಸ್, ಸ್ಥಾಪಕ ಅಧ್ಯಕ್ಷರಾದ ಈಶ್ವರ ಭಟ್ ಮಾಯಿಲ್ತೋಡಿ, ಅಸಿಸ್ಟೆಂಟ್ ಮ್ಯಾನೇಜರ್ ಅಭಿನಂದನ್ ಎ -ಪ್ರೊಡಕ್ಷನ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಮನ್ ಎಸ್ , ಪ್ರಗತಿಪರ ಕೃಷಿಕ ದಾಸಪ್ಪ ಗೌಡ ಕೋಡಿಯಡ್ಕ,ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಸ್ಮಿತ ಜಿ.ಕೆ ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಯನ್, ಮಾಜಿ ಸದಸ್ಯೆ ಉಮಾವತಿ,ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭಾ,ಶಾಲಾ ಮುಖ್ಯೋಪಾಧ್ಯಾಯರಾದ ಗಿರಿಜಾ,ಬಾಲ ವಿಕಾಸ ಸಮಿತಿ ಪೋಷಕ ಮುಸ್ತಫಾ ಕೆ.ಯಂ.ಅಂಡೆತ್ತಡ್ಕ ಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ ಪೂಜಾರಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮಾಲತಿ, ಶಾಲಾ ಮಾಜಿ ಅಧ್ಯಕ್ಷರಾದ ಡೀಕಯ್ಯ ಸಿ ತೇಜಸ್ವಿ ಆನಡ್ಕ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಪ್ರದೀಪ್ ನಾಯ್ಕ ಆನಡ್ಕ ಸ್ವಾಗತಿಸಿ, ಅಭಿನಂದನ್ ಎ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕರಾದ ಪರಮೇಶ್ವರ ಮಾಡಿದರು.




