ದೆಹಲಿ: ಶ್ರೀ ಎಸ್. ರಾಜಶೇಖರ್ ಹಿಲ್ಯಾರ್ ಹಾಗೂ ಶ್ರೀ P. P.ಹೆಗ್ಡೆ ಹಿರಿಯ ವಕೀಲರು ಇಂದು ದೆಹಲಿಯಲ್ಲಿ ನಡೆದ ಅಖಿಲ ಭಾರತ ಸ್ಟಾಕ್ ವಿಟ್ನೆಸ್ ರೀಫಾರ್ಮ್ಸ್ ಎಕ್ಸ್ಪರ್ಟ್ ಕಮಿಟಿಯ ಸಭೆಯಲ್ಲಿ ಭಾಗವಹಿಸಿದರು.
ಈ ಸಭೆಯಲ್ಲಿ ದೇಶದಾದ್ಯಂತ ಸ್ಟಾಕ್ ವಿಟ್ನೆಸ್ ವ್ಯವಸ್ಥೆಯ ಸುಧಾರಣೆ ಹಾಗೂ ಬಲವರ್ಧನೆಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಸವಿಸ್ತಾರ ಚರ್ಚೆಗಳು ನಡೆಯಿತು. ಸಭೆಯಲ್ಲಿ ಶ್ರೀ ಎಸ್. ರಾಜಶೇಖರ್ ಹಿಲ್ಯಾರ್ ಅವರು ಮಂಡಿಸಿದ ಅಮೂಲ್ಯ ಅಭಿಪ್ರಾಯಗಳು ಹಾಗೂ ಸೂಕ್ಷ್ಮ ಒಳನೋಟಗಳಿಗೆ ಸಮಿತಿಯ ಸದಸ್ಯರು ಅತ್ಯಂತ ಸಂತೋಷ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದರು.







