ಬೆಳ್ತಂಗಡಿ: ಸದಾ ಸಮಾಜಮುಖಿ ಚಟುವಟಿಕೆಗಳೊಂದಿಗೆ ತನ್ನದೇ ಆದ ವಿಶಿಷ್ಟ ಪರಿಕಲ್ಪನೆಗಳೊಂದಿಗೆ ಸಮಾಜ ಮಾಡುತ್ತಿರುವ ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ನೂತನ ಪದಾಧಿಕಾರಿಗಳನ್ನಾಗಿ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಕರ್ನಾಟಕದ ಇದರ ಸಂಸ್ಥಾಪಕರಾದ ದೀಪಕ್ ಜಿ ಬಿಳ್ತಂಗಡಿ ಇವರ ನೇತೃತ್ವದಲ್ಲಿ ಆಯ್ಕೆ ನಡೆಸಲಾಯಿತು.
2026-2027 ಸಾಲಿನ ಅಧ್ಯಕ್ಷರಾಗಿ ಜಗದೀಶ್ ಲಾಯಿಲ, ಉಪಾಧ್ಯಕ್ಷರಾಗಿ ಸಂದೀಪ್ ಬೆಳ್ತಂಗಡಿ , ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಕರಾಯ, ಜೊತೆ ಕಾರ್ಯದರ್ಶಿ ವಿನೋದ್ ಗುರಿಗಂಡ, ಪ್ರಧಾನ ಸಂಚಾಲಕರು ಪ್ರಶಾಂತ್ ಗುರುವಾಯನಕೆರೆ, ಸಹ ಸಂಚಾಲಕರು ಸಂತೋಷ್ ಉಜಿರೆ, ಸಂಘಟನಾ ಪ್ರಮುಖರಾಗಿ ದೇವರಾಜ್ ಪೂಜಾರಿ ಉಜಿರೆ, ಕೋಶಾಧಿಕಾರಿ ಪ್ರವೀಣ್ ಆಚಾರ್ಯ ಗುರುವಾಯನಕೆರೆ,
ಸಾಮಾಜಿಕ ಜಾಲತಾಣ ಶರತ್ ಕೆ.ಎಸ್, ಕ್ರೀಡಾಕಾರ್ದರ್ಶಿ ಗಣೇಶ್ ಲಾಯಿಲ, ವಿದ್ಯಾರ್ಥಿ ಪ್ರಮುಖ ಸಂದೇಶ್ ರೆಂಕೆದಗುತ್ತು, ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.







