ಪಡಂಗಡಿ: ಇಲ್ಲಿನ ಓಡೀಲು ದೇವಸ್ಥಾನದ ದ್ವಾರದ ಬಳಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಪಲ್ಸರ್ ಬೈಕ್ ಹಾಗೂ ಆಲ್ಟೋ ಕಾರು ನಡುವೆ ನಡೆದ ಈ ಅಪಘಾತದಲ್ಲಿ, ಪ್ರಗತಿಪರ ಕೃಷಿಕ ಅನಿಲ್ ಬಳಂಜ ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜೊತೆಯಲ್ಲಿದ್ದ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅನಿಲ್ ಬಳಂಜರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.







