ಉಪ್ಪಿನಂಗಡಿ: ಉಪ್ಪಿನಂಗಡಿಯ ಸಂಪ್ಯಾಡಿ ಎಂಬಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಮನೆಯ ಹೊರಗಡೆ ಕುಳಿತಿದ್ದ ಯುವ ಕೃಷಿಕರೊಬ್ಬರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ರಾಧಾಕೃಷ್ಣ ಗೌಡ ಅವರ ಪುತ್ರ ದಾಮೋದರ (31) ಮೃತ ಯುವಕ.
ದಾಮೋದರ ಅವರು ಕೃಷಿಕರಾಗಿದ್ದು, ಮನೆಯ ಹೊರಗಡೆ ಕುಳಿತಿದ್ದ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದಿದ್ದು, ಪರಿಣಾಮ ತಲೆಗೆ ಗಾಯವಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಮೃತರು ಅವಿವಾಹಿತರಾಗಿದ್ದು, ತಂದೆ ರಾಧಾಕೃಷ್ಣ ಗೌಡ, ತಾಯಿ ಸುಶೀಲ ಅವರನ್ನು ಅಗಲಿದ್ದಾರೆ.





