ಬೆಳ್ತಂಗಡಿ; ತಾಲೂಕಿನ ಕುತ್ಲೂರು ಗ್ರಾಮದ ನಿವಾಸಿ ಭಾರತಿ ಶೆಟ್ಟಿ ಅವರು ಮಾರಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು ಅವರ ಮನೆಯ ಆರ್ಥಿಕ ಸ್ಥಿತಿಗತಿ ಅರ್ಥೈಸಿಕೊಂಡು ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ವತಿಯಿಂದ ಮೇ.30 ರಂದು ಆರ್ಥಿಕ ನೆರವು ನೀಡಲಾಯಿತು.



ಮಾತೃ ಸಂಘದ ಬೆಳ್ತಂಗಡಿ ತಾಲೂಕಿನ ಕಾರ್ಯಕಾರಿ ಸಮಿತಿ ಸದಸ್ಯೆ ಸುಜಾತ ಶೆಟ್ಟಿ ಪೆರಿಂಜೆ ಇವರು ಭಾರತಿ ಶೆಟ್ಟಿ ಅವರ ಮನೆಗೆ ತೆರಳಿ ಈ ಸಹಾಯ ನಿಧಿ ವಿತರಿಸಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ವಲಯದ ಹಾಗೂ ಗ್ರಾಮ ಸಮಿತಿಯ ಪದಾಧಿಕಾರಿಗಳಾದ ರಾಜು ಶೆಟ್ಟಿ, ರವಿ ಶೆಟ್ಟಿ, ಪ್ರದೀಪ್ ಶೆಟ್ಟಿ, ಕಿರಣ್ ಶೆಟ್ಟಿ, ರಾಜೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶಿವಣ್ಣ ಶೆಟ್ಟಿ ಉಪಸ್ಥಿತರಿದ್ದರು.
ಸಹಕಾರ ನೀಡಿದ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ, ಬೆಳ್ತಂಗಡಿ ತಾಲೂಕಿನ ಸಂಚಾಲಕ ಎಂ.ಜಯರಾಂ ಭಂಡಾರಿ ಧರ್ಮಸ್ಥಳ ಹಾಗೂ ಸಹ ಸಂಚಾಲಕ ಕಿರಣ್ ಶೆಟ್ಟಿ ಇವರಿಗೆ ಕುಟುಂಬ ಆಭಾರಿತ್ವ ತಿಳಿಸಿತು.






