ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ವತಿಯಿಂದ ವಿನೂತನ ಕಾರ್ಯಕ್ರಮರಾಜ ಕೇಸರಿಯ ವಿದ್ಯಾರ್ಥಿ ಪ್ರಮುಖರಾದ ಸಂದೇಶ್ ಇವರ ಹುಟ್ಟು ಹಬ್ಬದ ಪ್ರಯುಕ್ತ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ಶ್ರಮದಾನ ನಡೆಸಲಾಯಿತು.



ಸದಾ ಜನಪರ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಕೊಡುಗೆಗಳು ನೀಡುತ್ತಿರುವ ತನ್ನ ವಿಶಿಷ್ಟವಾದ ಹೊಸ ಪರಿಕಲ್ಪನ ಸೇವೆಗಳೊಂದಿಗೆ ಸದಾ ಹೆಸರಿವಾಸಿಯಾಗಿರುವ ರಾಜ ಕೇಸರಿ ಸೇವಾ ಟ್ರಸ್ಟ್ (ರಿ) ಈ ಸಂದರ್ಭದಲ್ಲಿ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ರಾಜ ಕೇಸರಿ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಜಗದೀಶ್ ಲಾಯಿಲ, ಉಪಾಧ್ಯಕ್ಷರಾದ ಸಂದೀಪ್ ಬೆಳ್ತಂಗಡಿ, ಶರತ್ ಕರಾಯ,ವಿನೋದ್ ಗುರಿಗಂಡ.. ಪ್ರವೀಣ್ ಆಚಾರ್ಯ, ಸಂದೇಶ್, ಮುಖ್ಯ ಉಪಾಧ್ಯಾಯರಾದ ಪಿ. ಶಿವಾನಂದ್ ಭಂಡಾರಿ ಉಪಸ್ಥಿತರಿದ್ದರು.







