ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಪರಿಸರ ದಿನಾಚರಣೆಯನ್ನು ವಿಜ್ಞಾನ ಹಾಗೂ ಗಣಿತ ಸಂಘಗಳಿಂದ ನೆರವೇರಿಸಲಾಯಿತು.

ಮುಖ್ಯ ಅತಿಥಿಯಾಗಿ ಅರಣ್ಯ ಇಲಾಖೆಯಿಂದ ಉಪವಲಯ ಅರಣ್ಯ ಅಧಿಕಾರಿಯಾದ ರಾಘವೇಂದ್ರ ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು . ಪ್ರತಿ ವಿದ್ಯಾರ್ಥಿಯು ಅಮ್ಮನ ಹೆಸರಿನಲ್ಲಿ ಒಂದು ಗಿಡವನ್ನು ನೆಡಬೇಕೆಂಬುದನ್ನು ತಿಳಿಸಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಜಸಿಂತ ಉಪಸ್ಥಿತರಿದ್ದರು.
ಶಿಕ್ಷಕ ಶಿಕ್ಷಕಿಯರಾದ ನಯನ, ಪ್ರಮೀಳಾ ಎನ್, ವಾಗ್ದೇವಿ, ಸದಾನಂದ, ಸಮತಾ ಇವರ ನೇತೃತ್ವದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಿರೂಪಣೆಯನ್ನು ಆದ್ಯ ಜೈನ್ , ಸ್ವಾಗತವನ್ನು ಶ್ರೀವಿನಿತ್, ಧನ್ಯವಾದವನ್ನು ತ್ರಿಶಾಲಿ ನೆರವೇರಿಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.









