ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ, ಹಾಗೂ ಸ.ಹಿ.ಪ್ರಾ.ಶಾಲೆ, ಪಾಲೆದು ಶಾಲೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಮಾಹಿತಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.




ಕಾರ್ಯಕ್ರಮವನ್ನು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಹರೀಶ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ “ಭೂಮಿ ತಾಯಿ ರಕ್ಷಸಿ ಮುಂದಿನ ಪೀಳಿಗೆಗೆ ವರ್ಗಾಹಿಸಿ” ಪರಿಸರ ಕಾರ್ಯಕ್ರಮ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು ಎಲ್ಲರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿದರೆ ಉತ್ತಮ ಹಾಗೂ ಸ್ವಚ್ಛ ವಾತಾವರಣ ನಿರ್ಮಾಣವಾಗುವ ಜೊತೆಗೆ ಕಾಲಕಾಲಕ್ಕೆ ಮಳೆ ಆಗುತ್ತದೆ ಕೃಷಿಗೆ ಸಹಕಾರಿಯಾಗುತ್ತದೆ ರೈತರಿಗೆ ಹಾಗೂ ನಾಗರಿಕರಿಗೆ ಸಮೃದ್ಧಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸುವ ಮೂಲಕ ಶಾಲೆಗಳಲ್ಲಿ ಒಂದು ಮಗು ಒಂದು ಗಿಡ ಎಂಬ ಕಲ್ಪನೆಯ ಆಧಾರದಲ್ಲಿ ಸಾಮೂಹಿಕ ಗಿಡ ನಾಟಿ ಮಾಡಿದಾಗ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಮಾಹಿತಿ ನೀಡಿದರು
ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಶ್ರೀ ಮತಿ ಜಯಂತಿ ಶಾಲಾ SDMC ಅಧ್ಯಕ್ಷರು ಅನಿಲ್, ಕೃಷಿ ಮೇಲ್ವಿಚಾರಕರು ಕೃಷ್ಣ, ಶಾಲಾ ಮುಖ್ಯೋಧ್ಯಾಪಕರು ಮಂಜುಳಾ ಸಹ ಶಿಕ್ಷಕರು ಶ್ರದ್ದಾ, ಹಾಗೂ ರಕ್ಷಿತಾ, ಸೇವಾಪ್ರತಿನಿಧಿ ಶ್ರೀಮತಿ ನಂದಿನಿ, ಜಯಂತಿ, ಪ್ರವೀನಾ ಪಾಲಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು.




