ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಕೇಂದ್ರದ ಬಂಧುಗಳಾದ ವಿದುಷಿ ಶ್ರೀಮತಿ ಚೈತ್ರ ಭಟ್, ನಾಟಕ ತರಬೇತುದಾರರಾದ ಶ್ರೀ ಯಶವಂತ್ ಹಾಗೂ ಯಕ್ಷಗಾನ ತರಬೇತುದಾರರಾದ ಶ್ರೀ ಅರುಣ್ ಭಾಗವಹಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ.ಆರ್. ಅವರ ಮಾರ್ಗದರ್ಶನದಲ್ಲಿ ವಿವಿಧ ಸಂಘಗಳ ಉದ್ಘಾಟನೆ ನೆರವೇರಿತು. ಅತಿಥಿಗಳ ಪರಿಚಯವನ್ನು ಶ್ರೀಮತಿ ಗೀತಾ ಪಿ. ಅವರು ಮಾಡಿಕೊಟ್ಟರೆ, ಸಂಘಗಳ ಸಂಯೋಜಕಿ ಶಿಕ್ಷಕಿ ಶ್ರೀಮತಿ ಚೇತನ ರವರು ಸಂಘಗಳ ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗಣಿತ ಮತ್ತು ವಿಜ್ಞಾನ ಸಂಘ, ಲಿಟರರಿ ಕ್ಲಬ್, ಇ.ಎಲ್.ಸಿ. ಕ್ಲಬ್, ಎಚ್.ಆರ್.ಡಿ. ಹಾಗೂ ಇಂಟರಾಕ್ಟ್ ಕ್ಲಬ್, ಆರ್ಟ್ ಅಂಡ್ ಕ್ರಾಫ್ಟ್ ಕ್ಲಬ್, ವಾಲ್ ಮ್ಯಾಗಜಿನ್ ಕ್ಲಬ್ ಹಾಗೂ ಕ್ರೀಡಾ ಕ್ಲಬ್ಗಳ ವಾರ್ಷಿಕ ಕಾರ್ಯಯೋಜನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ಎಲ್ಲಾ ಕ್ಲಬ್ಗಳ ಸಂಯೋಜಕರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ್ತಾ ರವರು ನಿರೂಪಣೆಯಲ್ಲಿ ಸಹಕರಿಸಿದರು. ಸಾನ್ವಿ ಎಸ್. ಬಂಗೇರ ಸ್ವಾಗತ ಭಾಷಣ ಮಾಡಿದ್ದು, ರಿತಿಕಾ ಶೈಣೈ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.





