ಉಜಿರೆ: ಹಣ್ಣುಗಳ ರಾಜ ಹಲಸು ಮತ್ತು ಬಗೆಬಗೆಯ ಹಣ್ಣುಗಳ ಪ್ರಿಯರಿಗಾಗಿ ಉಜಿರೆಯಲ್ಲಿ ಸುವರ್ಣಾವಕಾಶವೊಂದು ಒದಗಿಬಂದಿದೆ. ರೋಟರಿ ಕ್ಲಬ್ ಉಜಿರೆ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ, ಗ್ರಾಮ ಪಂಚಾಯತ್ ಉಜಿರೆ ಹಾಗೂ ಬೆನಕ ಈವೆಂಟ್ ಇವರ ಜಂಟಿ ಆಶ್ರಯದಲ್ಲಿ ಬೃಹತ್ ‘ಹಲಸು ಮತ್ತು ಹಣ್ಣು ಮೇಳ’ ಆಯೋಜಿಸಲಾಗಿದೆ.

ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಬಳಿ ಇರುವ ಶ್ರೀ ಕೃಷ್ಣಾನುಗ್ರಹ ಕಲ್ಯಾಣ ಮಂಟಪದಲ್ಲಿ ಈ ಮೇಳ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ.

ದಿನಾಂಕ: ಜೂನ್ 26 (ಶುಕ್ರವಾರ), ಜೂನ್ 27 (ಶನಿವಾರ) ಮತ್ತು ಜೂನ್ 28 (ಆದಿತ್ಯವಾರ)
ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 9:30 ರವರೆಗೆ
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ವಿಶೇಷ ಮಾರಾಟಗಾರರು ಈ ಮೇಳದ ಮೆರುಗನ್ನು ಹೆಚ್ಚಿಸಲಿದ್ದಾರೆ. ಸಣ್ಣ ಉದ್ಯಮಿಗಳಿಗೆ ಹಾಗೂ ಗೃಹ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕೆಳಗಿನ ವಿಶೇಷ ಆಕರ್ಷಣೆಗಳು ಇಲ್ಲಿರಲಿವೆ:
ಬಾಯಿರೂರಿಸುವ ತಿನಿಸುಗಳು: ಹಲಸಿನ ಹಣ್ಣಿನ ಜಿಲೇಬಿ, ಬಿಸಿ ಬಿಸಿ ಹಲಸಿನ ಹೋಳಿಗೆ ಹಾಗೂ ಬಗೆಬಗೆಯ ಹಣ್ಣುಗಳ ಐಸ್ಕ್ರೀಮ್ಗಳು.
ವಿಶೇಷ ಉತ್ಪನ್ನಗಳು: ಹಲಸಿನ ಹಣ್ಣಿನ ಜಾಮ್, ಮಾವಿನ ಹಣ್ಣಿನ ಜಾಮ್, ಹಲಸಿನ ಉಪ್ಪಿನಕಾಯಿ, ಆಯುರ್ವೇದಿಕ್ ಮತ್ತು ಗೃಹ ತಯಾರಿಕೆಯ ಉತ್ಪನ್ನಗಳು.
ಕೃಷಿ ಆಸಕ್ತರಿಗೆ: ವಿವಿಧ ತಳಿಯ ಹಣ್ಣು ಮತ್ತು ಹೂವಿನ ಕಸಿ ಗಿಡಗಳು, ವಿವಿಧ ಹಣ್ಣುಗಳು ಹಾಗೂ ತರಕಾರಿ ಬೀಜಗಳು ಲಭ್ಯವಿರಲಿವೆ.

ಮೇಳಕ್ಕೆ ಭೇಟಿ ನೀಡುವವರಿಗಾಗಿ ಇಲ್ಲೊಂದು ಧಮಾಕಾ ಆಫರ್ ಇದೆ. ಮೇಳದಲ್ಲಿರುವ ‘ಸೆಲ್ಫಿ ಸ್ಟ್ಯಾಂಡ್’ನಲ್ಲಿ ಫೋಟೋ ತೆಗೆದು, ಅದನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ಹಾಕಬೇಕು.
ನಿಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ಅತಿ ಹೆಚ್ಚು ಜನ ವೀಕ್ಷಿಸಿದ ಟಾಪ್ 3 ವಿಜೇತರಿಗೆ ಗುಣಮಟ್ಟದ ಇಳಕಲ್ ಸೀರೆಯನ್ನು ಬಹುಮಾನವಾಗಿ ನೀಡಲಾಗುತ್ತದೆ. ವೀಕ್ಷಣೆಗೊಂಡ ಸ್ಟೇಟಸ್ನ ಸ್ಕ್ರೀನ್ಶಾಟ್ ಅನ್ನು ಆಯೋಜಕರಿಗೆ ವಾಟ್ಸಾಪ್ ಮಾಡಬೇಕಿರುತ್ತದೆ. ಇಷ್ಟೇ ಅಲ್ಲದೆ, ಸ್ಟೇಟಸ್ ಹಾಕಿದ ಪ್ರತಿಯೊಬ್ಬರಿಗೂ ‘ಸದ್ಗುರು ಆಯುರ್ವೇದ’ ವತಿಯಿಂದ ಆಕರ್ಷಕ ಉಡುಗೊರೆ ಸಿಗಲಿದೆ!
ಸಣ್ಣ ಉದ್ಯಮಿಗಳು ಹಾಗೂ ಗೃಹ ಉತ್ಪನ್ನಗಳ ತಯಾರಕರನ್ನು ಪ್ರೋತ್ಸಾಹಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೇಳವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.
ವಿವರಗಳಿಗಾಗಿ ಸಂಪರ್ಕಿಸಿ: ಭಾಸ್ಕರ ಪೂಜಾರಿ (ಮೊಬೈಲ್: 8105279767)







