ಬೆಳ್ತಂಗಡಿ: ಇಂದು ಇಡೀ ಭಾರತ ದೇಶದಲ್ಲಿ ನೊಂದಾವಣೆಯಾಗದ ಯಾವುದಾದರೂ ಒಂದು ದೊಡ್ಡ ಸಂಸ್ಥೆ ಇದೆ ಎಂದಾದರೆ ಅದು ಆರ್.ಎಸ್.ಎಸ್. ಮಾತ್ರ. ಇಂದು ಇಡೀ ದೇಶದಲ್ಲಿ ರಶೀದಿ ನೀಡದೆ ದೇಣಿಗೆಯನ್ನು ಸಂಗ್ರಹಿಸುತ್ತಿರುವ ಏಕೈಕ ಸಂಸ್ಥೆ ಎಂದರೆ, ಅದು ಆರ್.ಎಸ್.ಎಸ್.

ಇಂದು ಇಡೀ ದೇಶದಲ್ಲಿ ತಾವು ಸಂಗ್ರಹಿಸಿದ ದೇಣಿಗೆ ಹಣಕ್ಕೆ ಲೆಕ್ಕಾಚಾರವನ್ನು ನೀಡದ ಸಂಘಟನೆಯೆಂದರೆ ಅದು ಆರ್. ಎಸ್. ಎಸ್. ನೂರು ವರ್ಷಗಳ ಹಿಂದೆ ಸ್ಥಾಪನೆಯಾದ ಆರ್.ಎಸ್.ಎಸ್. ಪ್ರತಿ ವರ್ಷ ಗುರುಕಾಣಿಕೆಯ ಹೆಸರಿನಲ್ಲಿ ಜನರಿಂದ ಕಾನೂನಿನ ಮಾನ್ಯತೆಯಿಲ್ಲದೆ ಸಂಗ್ರಹಿಸುತ್ತಿರುವ ಕೋಟಿ ಕೋಟಿ ರೂಪಾಯಿ ದೇಣಿಗೆಗಳಿಗೆ ಯಾವುದೇ ರೀತಿಯ ಲೆಕ್ಕಪತ್ರವನ್ನಾಗಲಿ ಪಾರದರ್ಶಕತೆಯನ್ನಾಗಲೀ ಪ್ರದರ್ಶಿಸದೆ, ಪ್ರಶ್ನಿಸಿದವನನ್ನೇ “ನನ್ನನ್ನು ಪ್ರಶ್ನಿಸುವುದಕ್ಕೆ ನೀನು ಯಾರು” ಎಂದು ಕೇಳುತ್ತಿದೆ.

ಆರ್.ಎಸ್.ಎಸ್.ಗೆ ಎಂದಿಗೂ ಟೀಕೆಗಳನ್ನು ಸಹಿಸಿದ ಇತಿಹಾಸವೇ ಇಲ್ಲ. ಅವರ ಕಾರ್ಯವೈಖರಿ, ಸಿದ್ಧಾಂತ, ಭಾರತದ ಸಂವಿಧಾನ ಮತ್ತು ಕಾನೂನಿನ ಮೇಲಿನ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸಬಾರದು ಎಂಬುದೇ ಅವರ ಮನೋಧರ್ಮ. ಹೀಗೊಂದು ಸರ್ವಾಧಿಕಾರೀ ಮನೋಭಾವನೆಯನ್ನೇ ರೂಢಿಸಿಕೊಂಡು ಬಂದ ಸಂಘದ ಒಳಗೂ ಪ್ರಜಾಪ್ರಭುತ್ವ ಇಲ್ಲ , ಹೊರಗೂ ಅದು ಪ್ರಜಾಪ್ರಭುತ್ವವನ್ನು ಸಹಿಸುವುದಿಲ್ಲ. ಮೂಗಿನವರೆಗೆ ತಿಂದು ದುಂಡಾವರ್ತಿಯಾಗಿ ಸ್ವೇಚ್ಛಾಚಾರದಿಂದ ರಸ್ತೆಯಲ್ಲಿ ತಿರುಗಾಡುವ ಉಂಡಾಡಿ ಗುಂಡನ ಮನಸ್ಥಿತಿ ಆರ್.ಎಸ್.ಎಸ್.ನದು. ಅವರನ್ನು ಯಾರಾದರೂ ಟೀಕಿಸಿದರೆ, ಆಕ್ಷೇಪಿಸಿದರೆ, ಅವರ ದೋಷಗಳನ್ನು ಬೊಟ್ಟು ಮಾಡಿದರೆ ಆರ್.ಎಸ್.ಎಸ್. ಮತ್ತು ಅದರ ಇಡೀ ಪರಿವಾರ ಅವರ ಮೇಲೆ ಮುಗಿಬಿದ್ದು, ದೇಶದ್ರೋಹಿ, ಧರ್ಮದ್ರೋಹಿ, ಎಂಬ ಪಟ್ಟ ಕಟ್ಟಿ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತದೆ. ಅಂತರಂಗ ಮತ್ತು ಬಹಿರಂಗಗಳನ್ನು ಶುದ್ಧವಾಗಿಟ್ಟುಕೊಂಡವರು ಯಾವ ವಿಮರ್ಶೆಯನ್ನು ಕೂಡ ಆಕ್ಷೇಪಿಸುವುದಿಲ್ಲ, ಯಾವ ವಿಮರ್ಶೆಗೂ ಅವರು ಹೆದರುವುದಿಲ್ಲ. ಅಂತರಂಗದಲ್ಲಿ ಕೊಳಕುಗಳ ಮೂಟೆಯನ್ನು ಕಟ್ಟಿಕೊಂಡವರು ಮಾತ್ರ ವಿಮರ್ಶೆಗಳನ್ನು ನಿರಾಕರಿಸುತ್ತಾರೆ, ಟೀಕಿಸುವವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಾರೆ. ಕರ್ನಾಟಕ ಸರಕಾರದ ಮಾನ್ಯ ಗೃಹ ಸಚಿವರಾದ ಸನ್ಮಾನ್ಯ ಪ್ರಿಯಾಂಕಾ ಖರ್ಗೆಯವರು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತರಿಗೆ ಆರ್.ಎಸ್.ಎಸ್.ನ ನೋಂದಾವಣೆಯ ಕುರಿತು ಬರೆದ ಪತ್ರ ಮತ್ತು ಆ ಪತ್ರಕ್ಕೆ ಆರ್.ಎಸ್.ಎಸ್.ನ ಜನ ನೀಡಿದ ಪ್ರತಿಕ್ರಿಯೆ ಅವರ ಈ ಎಲ್ಲ ಕೊಳಕುಗಳನ್ನು ಅನಾವರಣಗೊಳಿಸಿದೆ.

ಪ್ರಿಯಾಂಕ ಖರ್ಗೆಯವರ ಪತ್ರಕ್ಕೆ ಸಂಘಪರಿವಾರದ ಮಂದಿ ಅವರವರ ಯೋಗ್ಯತೆಗೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಚಿತ್ತಾಪುರದ ಆರ್.ಎಸ್.ಎಸ್. ಪಥಸಂಚಲನ ವಿವಾದದ ಸಂದರ್ಭದಲ್ಲಿ ಇದೇ ಪ್ರಿಯಾಂಕ ಖರ್ಗೆಯವರು ಎತ್ತಿದ ಆರ್.ಎಸ್.ಎಸ್. ನೋಂದಾವಣೆಯ ಪ್ರಶ್ನೆಗೆ ಆಗ ಪ್ರತಿಕ್ರಿಸಿದ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ರಿಂದ ತೊಡಗಿ ಈಗ ಪತ್ರ ರವಾನೆಯಾದ ನಂತರ ಪ್ರತಿಕ್ರಿಯಿಸಿದ ಬಿಜೆಪಿಯ ಎಲ್ಲಾ ನಾಯಕರೂ ಅಸಂಬದ್ಧವಾದ ಮತ್ತು ಬಾಲಿಷ ಪ್ರತಿಕ್ರಿಯೆಗಳನ್ನು ನೀಡಿದ್ದಾರಷ್ಟೇ ಹೊರತು, ಒಂದೇ ಒಂದು ಸತ್ವಭರಿತ ಗಂಭೀರ ಪ್ರತಿಕ್ರಿಯೆಗಳನ್ನು ಇಂದಿನವರೆಗೆ ನೀಡಿಲ್ಲ. ನೀವು ಯಾಕೆ ರಿಜಿಸ್ಟ್ರೇಷನ್ ಮಾಡಿಸಿಲ್ಲ ಎಂಬುದಕ್ಕೆ ಇಂದಿನವರೆಗೆ ನಮಗೆ ಯಾರೂ ರಿಜಿಸ್ಟ್ರೇಷನ್ ಮಾಡುವಂತೆ ಹೇಳಿಲ್ಲ , ಹಿಂದೂ ಧರ್ಮವನ್ನೂ ರಿಜಿಸ್ಟ್ರೇಷನ್ ಮಾಡಲಾಗಿಲ್ಲ ಎಂಬ ಮೋಹನ್ ಭಾಗವತರ ಮಾತು ತೂಕವಿಲ್ಲದ ಮತ್ತು ಜನರನ್ನು ದಾರಿ ತಪ್ಪಿಸುವಂತ ಮಾತಾಗಿದೆ. ಭೂಮಿಯ ಮೇಲಿನ ಯಾವ ಧರ್ಮವೂ ರಿಜಿಸ್ಟ್ರೇಷನ್ ಆಗದೆ ಇರುವಾಗ ಹಿಂದೂ ಧರ್ಮ ರಿಜಿಸ್ಟ್ರೇಷನ್ ಆಗಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ನೇರ ಉತ್ತರವಾಗುತ್ತದೆ , ಇಡೀ ದೇಶದಲ್ಲಿ ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತ ಆರ್.ಎಸ್.ಎಸ್.ನ ಸರಸಂಘಚಾಲಕರಿಗೆ ತಮ್ಮ ಸಂಸ್ಥೆಯನ್ನು ರಿಜಿಸ್ಟ್ರೇಷನ್ ಮಾಡಬೇಕೆಂದಿದ್ದರೆ ಬೇರೆ ಯಾರಾದರೂ ಹೇಳಬೇಕಾಗಿದೆ ಎಂದರೆ ಅವರೆಂತಹಾ ನೈತಿಕ ಅಧಃಪತನದಲ್ಲಿ ಇದ್ದಾರೆ ಎಂಬುದು ಅರ್ಥವಾಗುತ್ತದೆ.

ಮೋಹನ್ ಭಾಗವತ್ ಆಗಲೀ, ಈಗಾಗಲೇ ಈ ಪ್ರಶ್ನೆಗಳಿಗೆ ಪ್ರತಿಕ್ರಿಸಿರುರುವ ಬಿಜೆಪಿ ನಾಯಕರ ಮಾತಿನಲ್ಲಾಗಲಿ ಅಂತರ್ಗತವಾಗಿರುವ ಒಂದು ಸಾಮಾನ್ಯ ಅಂಶವೆಂದರೆ , ಅದು, “ನಮ್ಮನ್ನು ಕೇಳಲು ನೀವು ಯಾರು?” ಎಂಬ ದಾಷ್ಠ್ಯದ ಮತ್ತು ಯಾರಿಗೂ ನಾವು ಉತ್ತರದಾಯಿಗಳಲ್ಲ ಎಂಬ ಅಹಂಕಾರ. ಖರ್ಗೆಯವರ ಪತ್ರಕ್ಕೆ ಖರ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ರಮೇಶ್ ಜಿಗಜಣಗಿಯವರು ಪ್ರಧಾನವಾಗಿ ಎರಡು ವಿಚಾರಗಳನ್ನು ಎತ್ತಿದ್ದಾರೆ. ಆರ್.ಎಸ್.ಎಸ್.ಗೆ ಸವಾಲು ಹಾಕಿದವರು ಯಾರು ಬದುಕಿಲ್ಲ ಎಂದು ಹೇಳುವ ಮೂಲಕ ಖರ್ಗೆಯವರಿಗೆ ಜೀವಬೆದರಿಕೆ ಹಾಕಿದ್ದಾರೆ , ದಲಿತರಿಗೆ ಏಕೆ ಆರ್.ಎಸ್.ಎಸ್. ಕಾಳಜಿ ಎಂದು ಕೇಳುವುದರ ಮೂಲಕ ದಲಿತರಿಗೂ ಆರ್.ಎಸ್.ಎಸ್.ಗೂ ಸಂಬಂಧವಿಲ್ಲ, ದಲಿತರು ಯಾರನ್ನೂ ಪ್ರಶ್ನಿಸುವ ಅಧಿಕಾರವಿಲ್ಲದವರು ಎಂಬ ದಲಿತ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ರಾಹುಲ್ ಗಾಂಧಿ ಮೆಚ್ಚಿಸಲು ರಾಜಕೀಯ ಗಿಮಿಕ್ ಎಂದ ವಿಜಯೇಂದ್ರ ಅವರ ಮಾತು, ಖರ್ಗೆಗೆ ಆರ್ಎಸ್ಎಸ್ ಫೋಬಿಯ ಇದೆ, ಖರ್ಗೆಯವರು ಜೆಹಾದಿ ಮಾನಸಿಕತೆಯ ಬೆಂಬಲಿಗರು ಎಂದ ಸಿ.ಟಿ. ರವಿಯವರ ಹಾರಿಕೆ, ಉಡಾಫೆ ಉತ್ತರ ನೀಡುವುದಿಲ್ಲ ಎಂಬ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತಿನಲ್ಲಿಯೂ , ಎಲ್ಲಿಯೂ ಖರ್ಗೆಯವರು ಎತ್ತಿದ್ದ ಪ್ರಶ್ನೆಗೆ ಉತ್ತರ ಕಾಣಿಸುತ್ತಿಲ್ಲ , ಬದಲಿಗೆ , ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಾಗದ ಪಲಾಯನವಾದ, ನಮ್ಮನ್ನು ಪ್ರಶ್ನಿಸಲು ನೀನು ಯಾರು , ನಾವು ಪ್ರಶ್ನಾತೀತರು ಎಂಬ ಸರ್ವಾಧಿಕಾರಿ ಧೋರಣೆ ಅವರ ಮಾತುಗಳಲ್ಲಿ ಎದ್ದು ಕಾಣುತ್ತದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪದೆ, ಜನರ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ಅವರನ್ನು ಗುಲಾಮಗಿರಿಗೆ ತಳ್ಳುವ ಮನೋಭಾವನೆ ಇವರ ಮಾತುಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಆರ್.ಎಸ್.ಎಸ್. ಒಂದು ಎಡ್ರಸ್ ಇಲ್ಲದ ಸಂಸ್ಥೆಯಾಗಿದೆ. 100 ವರ್ಷಗಳ ಹಿಂದೆ ಅದು ಸ್ಥಾಪನೆಯಾದ ನಂತರ ಇಂದಿನವರೆಗೆ ಅದಕ್ಕೊಮದು ಸರಿಯಾದ ವಿಳಾಸವೇ ಇಲ್ಲ. ಬೇರೆ ಯಾರದೋ ಹೆಸರಿನಲ್ಲಿರುವ ಕಟ್ಟಡಗಳ ಒಳಗೆ ಪರಾವಲಂಬಿಯಾಗಿ ಕಛೇರಿ ನಡೆಸುತ್ತಿರುವ ಇವರ ಮಹರಾಷ್ಠ್ರದ ನಾಗಪುರದಲ್ಲಿರುವ ಆರ್.ಎಸ್.ಎಸ್.ನ ಕೇಂದ್ರ ಕಛೇರಿ ಕೂಡಾ ಅದರ ಹೆಸರಿನಲ್ಲಿ ಇಲ್ಲ. ಕಾರ್ಯಕ್ರಗಳನ್ನು ನಡೆಸುವಾಗ , ಪಥ ಸಂಚಲನ ಮಾಡುವಾಗ ಬೇರೆ ಯಾರದೋ ಹೆಸರಿನಲ್ಲಿ ಅನುಮತಿ ಪಡೆಯುವ , ತಮ್ಮವರು ಅಪರಾಧ ಕೃತ್ಯ ಎಸಗಿದಾಗ, ಆತ ತಮ್ಮವನೇ ಅಲ್ಲ ಎಂದು ನುಣುಚಿಕೊಳ್ಳುವ ವಂಚನೆಯ ಎಲ್ಲಾ ಕಲೆಗಳನ್ನು ಆರ್.ಎಸ್.ಎಸ್. ಕರಗತ ಮಾಡಿಕೊಂಡಿದೆ. ನೊಂದಣಿಯಾಗದ ಆರ್.ಎಸ್.ಎಸ್. ಒಂದು ಬೇನಾಮೀ ಸಂಸ್ಥೆಯಾಗಿದ್ದು ಒಂದು ಭೂಗತ ಸಂಸ್ಥೆಯಂತೆ ಕಾರ್ಯಾಚರಿಸುತ್ತಿದೆ.
ಆರ್.ಎಸ್.ಎಸ್ ಪ್ರಚಾರಕರು ಮದುವೆಯಾಗುವುದಿಲ್ಲ. ಅವರಿಗೆ ಸ್ವಂತ ಮನೆ – ಆಸ್ತಿ ಎಂಬುದೂ ಇಲ್ಲ , ಸ್ವಂತ ಉದ್ಯೋಗವೂ ಇಲ್ಲ, ವರಮಾನವೂ ಇಲ್ಲ, ಕುಟುಂಬವೂ ಇಲ್ಲ ! ಹೀಗಿದ್ದರೂ ಈ ಪ್ರಚಾರಕರು ಐಷಾರಾಮಿ ಜೀವನವನ್ನು ಹೇಗೆ ನಡೆಸುತ್ತಾರೆ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಾ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡು ಭೋಗದ ಜೀವನ ನಡೆಸುವ ಇವರ ಆದಾಯದ ಮೂಲ ಯಾವುದು ? ಜನರಿಂದ ಕೋಟಿ ಕೋಟಿ ರೂಪಾಯಿ ಬಾಚುವ ಗುರುದಕ್ಷಿಣೆಗೆ ರಶೀದಿಯೂ ಇಲ್ಲ, ಲೆಕ್ಕ ಪತ್ರವೂ ಇಲ್ಲ, ಪಾರದರ್ಶಕತೆಯೂ ಇಲ್ಲ ! ಎಲ್ಲವೂ ನಿಗೂಢ ! ಒಟ್ಟಿನಲ್ಲಿ ಹಣ-ಅಧಿಕಾರ-ಸ್ವೇಚ್ಛಾಚಾರ ! ಇದೇ ಇವರ ಪರಮ ವೈಭವದ ಸ್ಥಿತಿ !
ತಾವೊಂದು ಬಾಡಿ ಆಫ್ ಇಂಡಿವಿಜುಯಲ್ಸ್, ಬಯಲಿನಲ್ಲಿ ನಿಂತು ನಾವು ವ್ಯವಹರಿಸುತ್ತೇವೆ, ನಮ್ಮ ಶಾಖೆಗಳಲ್ಲಿ ದೇಶಭಕ್ತಿಯನ್ನು ಕಳಿಸುತ್ತೇವೆ, ನಾವು ವ್ಯಕ್ತಿ ನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಆರ್.ಎಸ್.ಎಸ್. ಎಂತೆಂತಹ ದೇಶಭಕ್ತರನ್ನು ನಿರ್ಮಾಣ ಮಾಡಿದೆ, ಎಂತೆಂತಹ ವ್ಯಕ್ತಿತ್ವಗಳನ್ನು ಸೃಷ್ಟಿ ಮಾಡಿದೆ ಎಂಬುದಕ್ಕೆ ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ, ಭಕ್ತರ ಕಾಣಿಕೆಯ ಕೋಟ್ಯಂತರ ರೂಪಾಯಿಗಳನ್ನು ನುಂಗಿ ನೀರು ಕುಡಿದ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. 1980 ರಲ್ಲಿ ಆರ್.ಎಸ್.ಎಸ್. ನಡೆಸಿದ ರಾಮ ಶಿಲಾ ಅಭಿಯಾನದಲ್ಲಿ ಸಂಗ್ರಹಿಸಿದ ಎಂಟು ಕೋಟಿ ರೂಪಾಯಿಗಳಿಗೂ ಅಧಿಕ ಹಣದಿಂದ ತೊಡಗಿ ಪ್ರಾಣ ಪ್ರತಿಷ್ಠೆ ನಡೆದ ನಂತರ ಇಂದಿನವರೆಗೆ ಕಾಣಿಕೆಯಾಗಿ ಬಂದ ಕೋಟ್ಯಾಂತರ ರೂಪಾಯಿ ಹಣವನ್ನು ಇದೇ ಆರೆಸ್ಸೆಸ್ಸಿನ ಗರಡಿಯಲ್ಲಿ ಬೆಳೆದ ನಾಯಕರು ಲೂಟಿ ಹೊಡೆದಿದ್ದಾರೆಂದರೆ ಇವರನ್ನು ತಯಾರು ಮಾಡಿದ ಆರ್.ಎಸ್.ಎಸ್.ನ ನೈತಿಕತೆ ಏನು ಅನ್ನುವುದು ಅರ್ಥವಾಗುತ್ತದೆ. 2020 ರಲ್ಲಿ , ನಾ ಖಾವೂಂಗಾ ನಾ ಖಾನೇ ದೂಂಗ ಎಂದು ಘೋಷಿಸಿಕೊಂಡ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಂದ ಸ್ಥಾಪಿತವಾದ ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಅಧ್ಯಕ್ಷರು ಮಹಾಂತ ನೃತ್ಯ ಗೋಪಾಲ ದಾಸ್ ಆರ್.ಎಸ್.ಎಸ್. ಮತ್ತು ವಿಶ್ವ ಹಿಂದೂ ಪರಿಷತ್ತಿನ ಬಹಳ ದೊಡ್ಡ ನಾಯಕರು. ಟ್ರಷ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅನೇಕ ವರ್ಷದ ಕಾಲ ಆರ್.ಎಸ್.ಎಸ್. ಪ್ರಚಾರಕರಾಗಿ ಕೆಲಸ ಮಾಡಿದ ಪ್ರಭಾವೀ ನಾಯಕರು, ಟ್ರಸ್ಟ್ನ ಎಲ್ಲಾ ನಡವಳಿಕೆಯ ನೀತಿ ನಿರ್ಧಾರಕರು. ಇದುರ ಜೊತೆಗೆ ಟ್ರಸ್ಟಿನ ಸದಸ್ಯರೆಲ್ಲರೂ ಆರ್.ಎಸ್.ಎಸ್.ನಾಯಕರು ಅಥವಾ ಅದರ ಪರಿವಾರ-ಸಂಘಪರಿವಾರದ ನಾಯಕರು. ಇವರೆಲ್ಲರೂ ಇದ್ದು ಒಂದು ದೇವಾಲಯವನ್ನು ವ್ಯವಸ್ಥಿತವಾಗಿ ಮತ್ತು ಪ್ರಾಮಾಣಿಕವಾಗಿ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದಾದರೆ ಮತ್ತು ದೇವಾಲಯಕ್ಕೆ ಕಾಣಿಕೆಯಾಗಿ ಬಂದ ಚಿನ್ನದ ಮೂರ್ತಿ, ಬೆಳ್ಳಿಯ ಇಟ್ಟಿಗೆಗಳು ಮತ್ತು ಕೋಟ್ಯಾಂತರ ರೂಪಾಯಿ ಹಣವನ್ನು ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದೆ ಲೂಟಿ ಹೊಡೆಯಲಾಗಿದೆ ಎಂದಾದರೆ , ಇವರನ್ನು ಸೃಷ್ಟಿ ಮಾಡಿದ ಆರ್.ಎಸ್.ಎಸ್. ಇವರಿಗೆ ಕಲಿಸಿದ ದೇಶಭಕ್ತಿ ಯಾವ ರೀತಿಯದ್ದು, ಆರ್.ಎಸ್.ಎಸ್. ಇವರಲ್ಲಿ ನಿರ್ಮಾಣ ಮಾಡಿದ ವ್ಯಕ್ತಿತ್ವ ಎಂತಹದ್ದು ಎನ್ನುವುದು ಸ್ಪಷ್ಟವಾಗುತ್ತದೆ.
ಅಯೋಧ್ಯೆಯ ಹಗರಣಗಳ ಕುರಿತು ಎಸ್.ಐ.ಟಿ. ರಚನೆಯಾಗಿ ಎಂಟು ಜನರ ಬಂಧನ ಆಗಿದೆ. ಇವರಲ್ಲಿ ಪ್ರಮುಖ ಆರೋಪಿ ಈ ಎಲ್ಲಾ ಲೂಟಿಯ ಸೂತ್ರದಾರ ಎನಿಸಿಕೊಂಡ ಟಿನ್ನು ಯಾದವ್ ಇದೇ ಆರ್.ಎಸ್.ಎಸ್.ನ ಪ್ರಚಾರಕರಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾದ ಚಂಪತ್ ರಾಯ್ ಅವರ ಆಪ್ತ, ಅವರ ಕಾರಿನ ಡ್ರೈವರ್. ಅದರ ಜೊತೆಗೆ ಈ ಪ್ರಕರಣದಲ್ಲಿ ಬಂದಿತರಾದವರೆಲ್ಲರೂ ಪರಸ್ಪರ ಸಂಬಂಧಿಕರು . ಹಾಗಿದ್ದರೂ ಟ್ರಸ್ಟ್ನ ಅಧ್ಯಕ್ಷ ಗೋಪಾಲ್ ದಾಸ್ ಮತ್ತು ಪ್ರಧಾನ ಕಾರ್ಯದರ್ಶಿಯವರ ಕನಿಷ್ಡ ವಿಚಾರಣೆಯೂ ನಡೆದಿಲ್ಲ ಎಂಬುದು ತನಿಖೆಯ ಪ್ರಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಪ್ರತಿಪಕ್ಷಗಳನ್ನು ಉದ್ದೇಶಿಸಿ, ರಾಮ ಭಕ್ತರನ್ನು ಅವಮಾನಿಸಬೇಡಿ ಎಂಬ ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಾತು ಅವರು ಕೂಡಾ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದನ್ನು ಸೂಚಿಸುತ್ತದೆ. ಇವರೇ ನೇಮಿಸಿದ ಟ್ರಸ್ಟ್ ಮತ್ತು ಅದರ ನೌಕರರು ದೇವರ ದುಡ್ಡು ಲೂಟಿ ಹೊಡೆದು ಭಕ್ತರನ್ನು ಅವಮಾನಿಸಿರುವಾಗ ಪ್ರತಿಪಕ್ಷಗಳು ಅದನ್ನು ಪ್ರಶ್ನಿಸಿದರೆ ರಾಮ ಭಕ್ತರಿಗೆ ಅವಮಾನವಾಗುವುದಾದರೂ ಹೇಗೆ ? ಎಂಟು ಜನರನ್ನು ಬಂಧಿಸಿದ ನಂತರ ಕೂಡ ದೇಶದ ಪ್ರಧಾನ ಮಂತ್ರಿಗಳು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ್ನು ನಿರ್ಮಾಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಾಯಿಯಿಂದ ಈ ಪ್ರಕೆಣವನ್ನು ಖಂಡಿಸಿ ಒಂದೇ ಒಂದು ಶಬ್ದವೂ ಹೊರ ಬಂದಿಲ್ಲ ಎನ್ನುವುದು ಇವರೆಲ್ಲಾ ಎಷ್ಟರಮಟ್ಟಿಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎನ್ನುವುದನ್ನು ಬಯಲುಗೊಳಿಸುತ್ತದೆ. ಟ್ರಸ್ಟಿನ ಅಧ್ಯಕ್ಷರಾದ ಗೋಪಾಲ್ ದಾಸ್ ಅವರಾಗಲಿ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್ ರಾಯ್ ಅವರಾಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಪತ್ರಕರ್ತರು ಪ್ರಶ್ನಿಸಲು ಬಂದಾಗ ಕಚೇರಿಯ ಒಳಗೆ ಅಡಗಿ ಕುಳಿತಿರುವುದು ಅವರೆಂತಹಾ ಪುಕ್ಕಲರು ಎಂಬುದನ್ನು ಇಡೀ ದೇಶಕ್ಕೆ ಅರಿವಾಗುವಂತೆ ಮಾಡಿದೆ. ಆರ್.ಎಸ್..ಎಸ್ ನವರಿಗಾಗಲಿ ಈ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ್ನು ಸ್ಥಾಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಲಿ ಅಥವಾ ಮಂದಿರದ ಪ್ರಾಣ ಪ್ರತಿಷ್ಠೆಯ ಪೂರ್ವದಲ್ಲಿ ದೇಶದ ಪ್ರತಿ ಮನೆಗೆ ಮಂತ್ರಾಕ್ಷತೆಯನ್ನು ಹಂಚಿ ರಾಮಮಂದಿರವನ್ನು ಚುನಾವಣೆಯಲ್ಲಿ ಮತಧೃವೀಕರಣಕ್ಕೆ ಬಳಸಿದ ಕಾರ್ಯಕರ್ತರಿಗಾಗಲಿ ಯಾವ ದೇಶ ಪ್ರೇಮವೂ ಇಲ್ಲ , ಯಾವ ರಾಮ ಭಕ್ತಿಯು ಇಲ್ಲ , ಯಾವ ಜವಾಬ್ದಾರಿಯು ಇಲ್ಲ ಎನ್ನುವುದು ಸಾಬೀತಾಗುತ್ತದೆ .ಇವರಿಗೆ ಒಂದಿಷ್ಟವಾದರೂ ನೈತಿಕತೆ ಇರುವುದೇ ಹೌದಾದರೆ ಯಾವ ರೀತಿಯಲ್ಲಿ ಮಂತ್ರಾಕ್ಷತೆಯನ್ನು ಮನೆಮನೆಗೆ ಹಂಚಿದ್ದರು ಅದೇ ರೀತಿಯಲ್ಲಿ ತಾವು ಲೂಟಿ ಹೊಡೆದ ಹಣವನ್ನು ಮನೆ ಮನೆಗಳಿಗೆ ಹಂಚಿ ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಾಗಿದೆ
ಆರ್.ಎಸ್.ಎಸ್. ತನ್ನ ಶಾಖೆಗಳಲ್ಲಿ ತಯಾರು ಮಾಡಿದ ನಾಯಕರು ದೀರರೂ ಅಲ್ಲ ಶೂರರು ಅಲ್ಲ . ಬರಿಯ ಸರ್ವಾಧಿಕಾರಿ, ಸ್ವಾರ್ಥ , ಕೋಮುವಾದಿ ನಾಯಕರನ್ನು ಸೃಷ್ಟಿಸಿದ್ದು ಬಿಟ್ಟರೆ ಆರ್. ಎಸ್. ಎಸ್. ತನ್ನ 100 ವರ್ಷಗಳ ಸುಧೀರ್ಘ ಇತಿಹಾಸದಲ್ಲಿ ಕಳೆದು ಕಟ್ಟೆ ಹಾಕಿದ್ದೇನೆ ಇಲ್ಲ . ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಭಾರತೀಯರನ್ನು ಸತತವಾಗಿ ಅವಮಾನಿಸಿದಾಗಲೂ ಬಾಯಿ ಮುಚ್ಚಿ “ನನ್ನ ಗೆಳೆಯ” ಎಂದು ಹಪಹಪಿಸುವ ನಾಯಕರು, ಒಂದು ನೀಟ್ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ಸಾಧ್ಯವಾಗದ ಮಂತ್ರಿಗಳು, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ಅವರ ಕ್ರೀಡಾ ಬದುಕನ್ನು ನಾಶಪಡಿಸಿದ ವ್ಯಕ್ತಿಗಳು, ಬೆದರಿಕೆ ಮತ್ತು ಹಣದ ಆಮಿಷದ ಮೂಲಕ ವಿರೋಧ ಪಕ್ಷವನ್ನು ವಶಪಡಿಸಿಕೊಂಡು ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿರುವ ನಾಯಕರು, ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಅಕ್ರಮವಾಗಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿ ಇಡೀ ವ್ಯವಸ್ಥೆಯನ್ನು ನಾಶ ಮಾಡುತ್ತಿರುವವರು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು, ದೇಶದ ಸೌಹಾರ್ದತೆಯನ್ನು ಕದಡಿ ಹಿಂದೂಗಳನ್ನು ಮುಸಲ್ಮಾನರ ಮೇಲೆ ಮುಸಲ್ಮಾನರನ್ನು ಹಿಂದುಗಳ ಮೇಲೆ ಛೂ ಬಿಟ್ಟು ಮತ ದೃವೀಕರಣ ಮಾಡುವವರು, ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಅತ್ತಕಡೆ ಕಣ್ಣೆತ್ತಿಯೂ ನೋಡದವರು , ಇವರ ಆಡಳಿತವನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಬಿಂಬಿಸುವವರು , ಇವರೆಲ್ಲರೂ ಆರ್.ಎಸ್.ಎಸ್.ಸ ನೂರು ವರ್ಷಗಳ ಕಾಲ ಬೆವರು ಹರಿಸಿ ನಿರ್ಮಿಸಿದ ವ್ಯಕ್ತಿತ್ವಗಳು ಎಂದಾದರೆ ಇವರದ್ದು ಎಂಥಹಸ ದೇಶಪ್ರೇಮ , ಎಂತಹಾ ವ್ಯಕ್ತಿತ್ವ ನಿರ್ಮಾಣ ? ಬರೀ ಢೋಂಗಿ !
ಆರ್.ಎಸ್.ಎಸ್.ನವರಿಗೆ ಪತ್ರ ಬರೆಯುವುದರ ಮೂಲಕ ಮಾನ್ಯ ಪ್ರಿಯಾಂಕಾ ಖರ್ಗೆಯವರು ದೇಶಪ್ರೇಮದ ಮೊದಲ ಪಾಠವನ್ನು ಹೇಳಿದ್ದಾರೆ. ದೇಶಪ್ರೇಮದ ಮೊದಲ ಪಾಠವೆಂದರೆ ತಮ್ಮನ್ನು ತಾವು ದೇಶದ ಕಾನೂನಿನ ವ್ಯಾಪ್ತಿಗೆ ತಂದುಕೊಳ್ಳುವುದು, ತಮ್ಮ ಹಣಕಾಸು ವ್ಯವಹಾರವನ್ನು ಶುದ್ಧವಾಗಿಯೂ ಪಾರದರ್ಶಕವಾಗಿಯೂ ಇಟ್ಟುಕೊಳ್ಳುವುದು. ದೇಶದ ಜನರನ್ನು ಜಾತಿ , ಧರ್ಮ , ಭಾಷೆಗಳ ಬೇಧವಿಲ್ಲದೆ ಪ್ರೀತಿಸುವುದು ! ದೇಶಪ್ರೇಮ ಮತ್ತು ವ್ಯಕ್ತಿತ್ವ ನಿರ್ಮಾಣದ ಹೆಸರಿನಲ್ಲಿ ದೇಶದಲ್ಲಿ ಕೋಮು ಹಿಂಸಾಚಾರಗಳಿಗೆ ಪ್ರಚೋದನೆ ನೀಡುತ್ತಾ ಜನರ ಹಣವನ್ನು ಲೂಟಿ ಹೊಡೆದು ಐಷಾರಾಮಿ ಜೀವನವನ್ನು ನಡೆಸುತ್ತಾ ಬಂದಿರುವ ಆರ್.ಎಸ್.ಎಸ್. ದೇಶಕ್ಕೆ ಅಂಇದ ಶಾಪವಾಗಿದೆ. ಇದರ ನಾಯಕರನ್ನು ನಿಯಂತ್ರಿಸಿ ಅವರನ್ನು ದೇಶದ ಕಾನೂನಿನ ಅಡಿಯಲ್ಲಿ ಕಾರ್ಯಾಚರಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದಲೇ ಕರ್ನಾಟಕ ರಾಜ್ಯದ ಜವಾಬ್ದಾರಿಯುತ ಗೃಹ ಸಚಿವರಾದ ಪ್ರಿಯಾಂಕ ಖರ್ಗೆಯವರು ನೀವೇಕೆ ನೊಂದಣಿ ಮಾಡಿಸಿಕೊಳ್ಳಲಿಲ್ಲವೆಂದು ಆರ್.ಎಸ್.ಎಸ್. ಸರಸಂಘಚಾಲಕರಾದ ಮೋಹನ್ ಭಾಗವತರವರಿಗೆ ಪತ್ರವನ್ನು ಬರೆದಿದ್ದಾರೆ . ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯರೂ ಸಂಘ ಪರಿವಾರವನ್ನು ದಶಕಗಳಿಂದ ಬೆಂಬಲಿಸುತ್ತಾ ಬಂದಿರುವ ಆರ್.ಎಸ್.ಎಸ್.ನ ಅನುಮೋದಕರೂ ಪೇಜಾವರ ಮಠಾಧೀಶರೂ ಆದ ಶ್ರೀ.ವಿಶ್ವ ಪ್ರಸನ್ನ ತೀರ್ಥರು ಸಚಿವ ಪ್ರಿಯಾಂಕ ಖರ್ಗೆಯವರ ಪತ್ರವನ್ನು ಬೆಂಬಲಿಸಿ ಆರ್.ಎಸ್.ಎಸ್. ನೊಂದಾವಣೆಯಾದರೆ ಆರೋಪಗಳಿಂದ ಮುಕ್ತವಾಗಬಹುದು ಎಂಬ ಮಾತನ್ನು ಹೇಳಿರುವುದು ಪ್ರಿಯಾಂಕಾ ಖರ್ಗೆಯವರ ಪತ್ರದ ಮಹತ್ವವನ್ನು ಸಾರಿ ಹೇಳುತ್ತಿದೆ. ಇನ್ನಾದರೂ ಮಾನ್ಯ ಸರಸಂಘಚಾಲಕರಾದ ಮೋಹನ್ ಭಾಗವತ್ರವರು ತಮ್ಮ ಸಂಸ್ಥೆಯನ್ನು ಭಾರತದ ಕಾನೂನಿನ ಅಡಿಯಲ್ಲಿ ನೊಂದಾವಣೆ ಮಾಡಿ , ಕಾನೂನಿನ ವ್ಯಾಪ್ತಿಯೊಳಗೆ ತಮ್ಮ ಸಂಘವನ್ನು ತಂದು, ಭಾರತದ ಸಂವಿಧಾನಕ್ಕೆ ಗೌರವ ನೀಡಬೇಕೆಂದು .
-ಅಮಳ ರಾಮಚಂದ್ರ
ಕೆ.ಪಿ.ಸಿ.ಸಿ. ವಕ್ತಾರ.






