ಬೆಳ್ತಂಗಡಿ: ತಾಲೂಕಿನ ಪಣಕಜೆ ವ್ಯಾಪ್ತಿಯ ಸಬರ ಬೈಲು ಅಂಗನವಾಡಿಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಅಂಗನವಾಡಿ ವ್ಯಾಪ್ತಿಯ ಮಕ್ಕಳ ಹೆತ್ತವರು ಸ್ವಯಂ ಚಿತ್ತರಾಗಿ ಹಾಗೂ ಅಂಗನವಾಡಿ ಕಾರ್ಯಕರ್ತರ ಹಾಗೂ ಆಶಾ ಕಾರ್ಯಕರ್ತರ ವಿಶೇಷ ಮುತುವರ್ಜಿಯಿಂದ ತಮ್ಮ ವ್ಯಾಪ್ತಿಯ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿದರು.

ಕಾರ್ಯಕ್ರಮಕ್ಕೂ ಮೊದಲು ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರಿಂದ ಮಹಾಮಾರಿ ಪೋಲಿಯೋ ಬಗ್ಗೆ ಸಾರ್ವಜನಿಕರಿಗೆ ವಿಶೇಷ ತಿಳುವಳಿಕೆ ನೀಡಲಾಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮದ ಅಂಗನವಾಡಿ ವ್ಯಾಪ್ತಿಗೊಳಪಟ್ಟ ಪುಟಾಣಿಗಳ ಪೋಷಕರು, ಊರ ಗಣ್ಯರು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಪ್ರೇಮಾ, ಅಂಗನವಾಡಿ ಕಾರ್ಯಕರ್ತೆ ಗೀತಾ ಇವರು ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.







