ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ ರಾಷ್ಟೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಎಸ್. ಡಿ ಯಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿಯಾಗಿರುವ ಡಾ. ಶಿವಪ್ರಸಾದ್ ಶೆಟ್ಟಿ ಇವರು ಆಗಮಿಸಿ ‘truth is God, God is truth’ ಸತ್ಯ, ಪ್ರಾಮಾಣಿಕತೆ, ಪಾರದರ್ಶಕತೆ,ಧನಾತ್ಮಕ ಚಿಂತನೆಗಳ ಮೂಲಕ ನಾವು ಬಲಿಷ್ಠರಾಗಿದ್ದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಯುತವಾಗಿರಬಹುದು,ಯಾವುದೇ ರೋಗಗಳನ್ನು ಹಿಮ್ಮೆಟ್ಟಿಸಬಹುದು ವೈದ್ಯರು ನಮ್ಮಲ್ಲಿ ಸಕಾರಾತ್ಮಕ ಚಿಂತನೆಯನ್ನು ಉದ್ದೀಪನ ಗೊಳಿಸಿ ನಮ್ಮ ಪಾಲಿಗೆ ದೇವತಾ ಸ್ವರೂಪಿಗಳಾಗಿ ವೈದ್ಯೋ ನಾರಾಯಣೋ ಹರಿ :ಎಂಬ ಮಾತಿಗೆ ಸಾಕ್ಷಿಯಾಗುತ್ತಾರೆ ಎಂದು ಹೇಳಿದರು.
ವೈದ್ಯಲೋಕದ ದಂತಕಥೆ ಯಾದ ಡಾ. ಬಿ ಸಿ ರಾಯ್ ರವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ,ತ್ಯಾಗವನ್ನು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕಮಲ್ ತೇಜು ರಜಪೂತ್ ಇವರು ವಹಿಸಿಕೊಂಡಿದ್ದರು. ಶಿಕ್ಷಕಿ ಪೂರ್ಣಿಮ ಕೆಎಂ ನಿರೂಪಿಸಿದ ಈ ಕಾರ್ಯಕ್ರಮಕ್ಕೆ ಶಿಕ್ಷಕಿ ಕೇಶವತಿ ಕೆ ಇವರು ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ಕೆ ವಂದಿಸಿದರು.







