ಬೆಳ್ತಂಗಡಿ: ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬೆಳ್ತಂಗಡಿಯ ನೋಟರಿ ಹಾಗೂ ವಕೀಲರಾದ ಶ್ರೀ ಮುರಳಿ ಬಿ. ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಶಿರ್ಲಾಲಿನ ವಿದ್ಯಾರ್ಥಿಗಳಿಗೆ ಸತತ 12ನೇ ವರ್ಷವೂ ಉಚಿತ ನೋಟ್ಪುಸ್ತಕಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶ್ರೀ ಉದಯ ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ಅಕ್ಷತಾ, ಸದಸ್ಯ ಶ್ರೀ ಮೆಗು, ಮುಖ್ಯ ಶಿಕ್ಷಕ ಶ್ರೀ ಕರಿಯಪ್ಪ ಎ.ಕೆ. ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ರಾಜೇಶ್ವರಿ ನಾಯಕ ನಿರೂಪಿಸಿದರು. ಮುಖ್ಯ ಶಿಕ್ಷಕ ಶ್ರೀ ಕರಿಯಪ್ಪ ಎ.ಕೆ. ಸ್ವಾಗತಿಸಿ ಮಾತನಾಡಿದರೆ, ಶ್ರೀಮತಿ ಸರೋಜಿನಿ ಎಂ. ವಂದಿಸಿದರು. ಶಿಕ್ಷಕರಾದ ಶ್ರೀಮತಿ ಸುಷ್ಮಾ, ಶ್ರೀಮತಿ ದೀಪಾ ಹಾಗೂ ಶ್ರೀ ಪುರಂದರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಕೈಜೋಡಿಸುತ್ತಿರುವ ಶ್ರೀ ಮುರಳಿ ಬಿ. ಹಾಗೂ ಅವರ ಕುಟುಂಬದ ಸಮಾಜಮುಖಿ ಸೇವೆಯನ್ನು ಶಾಲಾ ವತಿಯಿಂದ ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು.





