ಧರ್ಮಸ್ಥಳ: ದಿನಾಂಕ 6-7-2026 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಕಸಬಾ ವಲಯದ ಶೃಂಗೇರಿ ಶ್ರೀ ಶಾರದಾಂಬ ಶಾಖಾ ಮಠದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ಪೂಜೆ, ಭಜನೋತ್ಸವ ಹಾಗೂ ಶೋಭಾ ಯಾತ್ರೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು

ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಹಾಗೂ ಖಾವಂದರ ಆಪ್ತ ಕಾರ್ಯದರ್ಶಿಗಳಾದ ಎ ವೀರು ಶೆಟ್ಟಿ ಯವರು, ಭಜನಾ ಪರಿಷತ್ತಿನ ರಾಜ್ಯ ಸಂಚಾಲಕರಾದ ಜಿ ಸುಬ್ರಮಣ್ಯ ಪ್ರಸಾದ್ ಮತ್ತಿತರ ಗಣ್ಯರಿಗೆ,ಕ್ಷೇತ್ರದ ಪ್ರಮುಖರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.
ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾದ ಕೆ ಜಿ ಮಂಜುನಾಥ್, ಸಮಿತಿ ಪದಾಧಿಕಾರಿಗಳು,ಸದಸ್ಯರು, ಭಜನಾ ಪರಿಷತ್ ಅಧ್ಯಕ್ಷರಾದ ಗಂಗಾಧರ್ ನಾಯ್ಕ್ ಮತ್ತು ಪದಾಧಿಕಾರಿಗಳು,ಸದಸ್ಯರು, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಉಪಸ್ಥಿತರಿದ್ದರು.





