ಕುಂದಾಪುರ: ಕುಂದಾಪುರ ತಾಲೂಕು ಪರಿಷತ್ತಿನ ವಂಡ್ಸೆ ಹಾಗೂ ಚಿತ್ತೂರಿನ ವಲಯ ಸಭೆಯು ವಂಡ್ಸೆ ಯೋಜನೆಯ ಮೇಲ್ವಿಚಾರಕರ ಕಚೇರಿಯಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಭಜನಾ ಪರಿಷತ್ ನ ಉಪಾಧ್ಯಕ್ಷರು ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಬಸ್ರೂರು ರವರು ವಹಿಸಿದ್ದು ಭಜನಾ ಕಮ್ಮಟದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್ ಬಸ್ರೂರು ವಂಡ್ಸೆ ವಲಯ ಮೇಲ್ವಿಚಾರಕರಾದ ಶ್ರೀ ಚಂದ್ರ ಮಧುವನ, ಚಿತ್ತೂರು ವಲಯ ಮೇಲ್ವಿಚಾರಕರಾದ ಮಂಜುನಾಥ್ ನಾಯ್ಕ್, ವಲಯ ಸಂಯೋಜಕರಾದ ಶ್ರೀ ಚಂದ್ರ ಪೂಜಾರಿ ಹೆಮ್ಮಾಡಿ ಉಪಸ್ಥಿತರಿದ್ದರು.


ವಂಡ್ಸೆ ವಲಯದ ಅಧ್ಯಕ್ಷರು ರಾಗಿ ಶ್ರೀ ಸದಾನಂದ ಆಚಾರ್ಯ ರವರನ್ನು ಚಿತ್ತೂರು ವಲಯದ ಸಹಸಂಯೋಜಕರಾಗಿ ಶ್ರೀಮತಿ ಬೇಬಿ ಅವರನ್ನು ಆಯ್ಕೆ ಮಾಡಲಾಯಿತು.

ಎರಡು ವಲಯದ ಸುಮಾರು 12ಕು ಹೆಚ್ಚಿನ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತಿ ಇದ್ದು ಭಜನಾ ಕಮ್ಮಟದ ಪೂರ್ವ ತಯಾರಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದರು ಹಾಗೂ ಪ್ರತಿ ವಲಯದಿಂದ ನಾಲ್ಕು ಜನ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿ ಕಮ್ಮಟಕ್ಕೆ ತರಬೇತಿಗೆ ಬರುವಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.






