ಉಜಿರೆ, ಸೆ. 10: ಸ್ಯಾಂಡಲ್ವುಡ್ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಮುಂಬರುವ ಕುತೂಹಲಕಾರಿ ಚಲನಚಿತ್ರ ‘ಅಭೇದ್ಯಂ’ (Abhedyam) ಚಿತ್ರದ ಅಧಿಕೃತ ಪೋಸ್ಟರ್ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ‘ಎಸ್.ಡಿ.ಎಂ ಆರೋಹಂ – 2026 ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ ಅವರು ಅಭೇದ್ಯ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ಎಆರ್ ಪ್ರೊಡಕ್ಷನ್ಸ್ (AR Productions) ಬ್ಯಾನರ್ ಅಡಿಯಲ್ಲಿ ಅರುಣ್ ರೈ ತೋಡಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂದೀಪ್ ಬಾರಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಾರ್ಯಾಧ್ಯಕ್ಷ (Executive Producer) ಜವಾಬ್ದಾರಿಯನ್ನು ರಾಜೇಶ್ ಕುಡ್ಲ ನಿರ್ವಹಿಸುತ್ತಿದ್ದಾರೆ.
ಚಿತ್ರದ ಪೋಸ್ಟರ್ನಲ್ಲಿ ಕಾಲ್ಗೆಜ್ಜೆ ಧರಿಸಿದ ರಕ್ತಸಿಕ್ತ ಕಾಲುಗಳು ಹಾಗೂ ಭೀಕರ ಹಿನ್ನೆಲೆ ವಾತಾವರಣ ಕಾಣುತ್ತಿದ್ದು, ದೈವಿಕ ರಹಸ್ಯದ ಸುಳಿವು ನೀಡುತ್ತಿದೆ.

ನಾಯಕ ನಟ: ವಿಜಯ ರಾಘವೇಂದ್ರ
ಖ್ಯಾತ ನಟ-ನಟಿಯರು: ಸಿಂಚನ ಪಿ ರಾವ್, ಸುಂದರ್ ವೀಣಾ, ರೋಶನ್ ವೇಗಸ್, ಪ್ರವೀಣ್ ಜೈನ್, ಮೋಹನ್ ಶೇಣಿ, ರಾಜೇಶ್ ಧನಶಾಲೆ, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ.
ಕಾಮಿಡಿ ಕಿಲಾಡಿಗಳು ಫೇಮ್: ರಾಕೇಶ್ ಪೂಜಾರಿ, ಸೂರಜ್, ಸೂರ್ಯ, ರಾಧೇಶ್

ನಿರ್ಮಾಣ: ಅರುಣ್ ರೈ ತೋಡಾರ್ (ಎಆರ್ ಪ್ರೊಡಕ್ಷನ್ಸ್)
ಕಥೆ, ಚಿತ್ರಕಥೆ, ನಿರ್ದೇಶನ: ಸಂದೀಪ್ ಬಾರಾಡಿ
ಛಾಯಾಗ್ರಹಣ (DOP): ಮಯೂರ್ ಆರ್ ಶೆಟ್ಟಿ
ಸಂಗೀತ: ವರುಣ್ ಉಣ್ಣಿ, ಕಿಶೋರ್ ಕುಮಾರ್ ಶೆಟ್ಟಿ
ಹಿನ್ನೆಲೆ ಸಂಗೀತ (BGM): ವರುಣ್ ಉಣ್ಣಿ
ಗಾಯಕರು: ವಾಸುಕಿ ವೈಭವ್, ವರುಣ್ ಉಣ್ಣಿ
ಸಂಕಲನ (Editor): ಗಣೇಶ್ ನೀರ್ಚಾಲ್
ಕಾಸ್ಟಿಂಗ್ ನಿರ್ದೇಶನ, ಚಿತ್ರಕಥೆ, ಸಂಭಾಷಣೆ: ಯುವ ಶೆಟ್ಟಿ
ಸಂಭಾಷಣೆ ಹಾಗೂ ಸಾಹಿತ್ಯ: ಡಿಬಿಸಿ ಶೇಖರ್, ಗೌತಮ್
ಸಾಹಸ ನಿರ್ದೇಶನ (ಫೈಟ್): ಮಾಸ್ ಮಾದ
ಕಲಾ ನಿರ್ದೇಶನ: ಮಹೇಶ್ ಏನ್ಮೂರು
ನೃತ್ಯ ನಿರ್ದೇಶನ: ಸೂರಜ್ (ಕಾಮಿಡಿ ಕಿಲಾಡಿಗಳು), ತರುಣ್ ರಾಜ್
ಸಿಜಿ / ವಿಎಫ್ಎಕ್ಸ್ (VFX): ಸುಶ್ರುತ್ ಭಟ್
ಪ್ರೊಡಕ್ಷನ್ ಮ್ಯಾನೇಜರ್: ಪ್ರಜ್ಞೇಶ್ ಶೆಟ್ಟಿ
ಚಿತ್ರತಂಡ ಪ್ರಕಟಿಸಿರುವಂತೆ ‘ಅಭೇದ್ಯಂ’ ಸಿನಿಮಾ 2026ರ ನವೆಂಬರ್ನಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.




