ಅಭಿನಯ ನೇತ್ರಿ ಪ್ರಿಯಾಂಕಾ ಉಪೇಂದ್ರ ಅವರ ಬಹುನಿರೀಕ್ಷಿತ, 50ನೇ ಮೈಲಿಗಲ್ಲಿನ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ಈಗ ಸ್ಯಾಂಡಲ್ವುಡ್ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಇತ್ತೀಚೆಗಷ್ಟೇ ಹೊರಬಂದಿರುವ ಚಿತ್ರದ ಟ್ರೇಲರ್ ಸಿನಿಪ್ರಿಯರ ನಿದ್ದೆಗೆಡಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲವನ್ನು ಬೆಟ್ಟದಷ್ಟು ಹೆಚ್ಚಿಸಿದೆ. ಹಾಗಾದ್ರೆ ಏನಿದೆ ಈ ‘ಡಿಟೆಕ್ಟಿವ್ ತೀಕ್ಷ್ಣ’ ಕಥೆಯಲ್ಲಿ? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್!

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕವೇ ತನ್ನದೇ ಆದ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಉಪೇಂದ್ರ, ಇದೀಗ ತಮ್ಮ ಕೆರಿಯರ್ನ ಅರ್ಧ ಶತಕದ ಸಂಭ್ರಮದಲ್ಲಿದ್ದಾರೆ. ಹೌದು, ಪ್ರಿಯಾಂಕಾ ಅಭಿನಯದ 50ನೇ ಚಲನಚಿತ್ರ ‘ಡಿಟೆಕ್ಟಿವ್ ತೀಕ್ಷ್ಣ’ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಟ್ರೇಲರ್ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.


ತ್ರಿವಿಕ್ರಮ ರಘು ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಗುತ್ತ ಮುನಿಪ್ರಸನ್ನ, ಜಿ. ಮುನಿ ವೆಂಕಟ್ಚರಣ್ ಹಾಗೂ ಪುರುಷೋತ್ತಮ್ ಬಿ.ಕೊಯ್ಯೂರು ಜಂಟಿಯಾಗಿ ನಿರ್ಮಿಸಿದ್ದಾರೆ.

ಬುದ್ಧಿವಂತಿಕೆಗೆ ಆದ್ಯತೆ ನೀಡುವ ವಿಭಿನ್ನ ಥ್ರಿಲ್ಲರ್:
ಸಾಮಾನ್ಯವಾಗಿ ಆಕ್ಷನ್ ಅಥವಾ ಥ್ರಿಲ್ಲರ್ ಸಿನಿಮಾಗಳಲ್ಲಿ ದೈಹಿಕ ಶಕ್ತಿ ಮೆರೆಯುವುದೇ ಹೆಚ್ಚು. ಆದರೆ ‘ಡಿಟೆಕ್ಟಿವ್ ತೀಕ್ಷ್ಣ’ ಸಿನಿಮಾದಲ್ಲಿ ದೈಹಿಕ ಬಲಕ್ಕಿಂತ, ನಾಯಕಿಯ ಬುದ್ಧಿವಂತಿಕೆ ಮತ್ತು ಸಮಯಪ್ರಜ್ಞೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ತಮ್ಮ 50ನೇ ಸಿನಿಮಾದಲ್ಲಿ ತೀಕ್ಷ್ಣವಾದ ಬುದ್ಧಿವಂತಿಕೆಯಿಂದ ಕೇಸ್ ಸಾಲ್ವ್ ಮಾಡಲು ಬರ್ತಿರೋ ಪ್ರಿಯಾಂಕಾ ಉಪೇಂದ್ರ, ಆಗಸ್ಟ್ 7 ರಂದು ಬೆಳ್ಳಿಪರದೆಯ ಮೇಲೆ ಎಂಟ್ರಿ ಕೊಡಲಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಎಷ್ಟರಮಟ್ಟಿಗೆ ಧೂಳೆಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.





