ಮಚ್ಚಿನ : (ಸೆ .17) ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವರಿಗೆ ಕಾರ್ತಿಕ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಸಂತಿ ಲಕ್ಷ್ಮಣ್ , ಕುವೆಟ್ಟು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ಚಂದ್ರಕಾಂತ ನಿಡ್ಡಾಜೆ, ಮಚ್ಚಿನ ಶಕ್ತಿ ಕೇಂದ್ರ ಅಧ್ಯಕ್ಷ ಶ್ರೀ ನಾರಾಯಣ ಶೆಟ್ಟಿ ನೆತ್ತರ , ಬೂತ್ ಅಧ್ಯಕ್ಷರುಗಳಾದ ಶ್ರೀ ವಿಜಯ್ ಮಡಕ್ಕಿಲ, ಶ್ರೀ ರಮೇಶ್ ಕೊಡ್ಯೇಲು,

ನೊಣಯ್ಯ, ಸುಕುಮಾರ್ , ಜಯಶ್ರೀ ಮಚ್ಚಿನ ಚೇತನ ಪಲ್ಲತಳ, ಶ್ರೀ ಶ್ಯಾಮ್ ಸುಂದರ್, ಶ್ರೀ ಚಿತ್ರಂಜನ ಕುರುಡಂಗೆ, ವಿಶ್ವ ಹಿಂದೂ ಪರಿಷತ್ತಿನ ಶ್ರೀ ಪ್ರಭಾಕರ ಮುದಲಡ್ಕ, ಶ್ರೀ ಪುರಂದರ ಶೆಟ್ಟಿ ನೆತ್ತರ ಹಾಗೂ ಪ್ರಮುಖರು,ಮೋದಿಜೀ ಅಭಿಮಾನಿಗಳು,ಭಕ್ತಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.






