ತೀರ್ಥಹಳ್ಳಿ: ತೀರ್ಥಹಳ್ಳಿಯ ರಾಮೇಶ್ವರ ಮಂದಿರದ ಸಭಾಂಗಣದಲ್ಲಿ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕಿನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ತೀರ್ಥಹಳ್ಳಿ ಇವರು ವಹಿಸಿದ್ದರು.

ರಾಜ್ಯ ಭಜನಾ ಪರಿಷತ್ತಿನ ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಇವರು ಸಭೆಯನ್ನು ಉದ್ಘಾಟಿಸಿ ಕ್ಷೇತ್ರದ ಕಾರ್ಯ ಚಟುವಟಿಕೆಯ ಹಾಗೂ ಭಜನಾ ಕಮ್ಮಟ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.


ಸಭೆಯ ಉದ್ದೇಶಿಸಿ ಗೌರವಾಧ್ಯಕ್ಷರಾದ ಡಾಕ್ಟರ್ ಜೀವಂದರ್ ಜೈನ್ ಅತಿಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಂಡರು. ತೀರ್ಥಹಳ್ಳಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ಜಗದೀಶ್ ಅಲ್ಸೆ ಶ್ರೀಮತಿ ಮಮತಾ ಶೆಟ್ಟಿ ಇವರು ಭಜನಾ ಕಮ್ಮಟದಲ್ಲಿ ಪಾಲ್ಗೊಳ್ಳುವಿಕೆಯಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಶ್ರೀಯುತ ಶಶಿಕಾಂತ್ ಹಂದೆ ಉಡುಪಿ ಜಿಲ್ಲಾ ಸಮನ್ವಯ ಅಧಿಕಾರಿ ರವೀಂದ್ರ ಎಸ್, ಪತ್ರಕರ್ತರಾದ ತುಪ್ಪದ ಮನೆ ಶಿವಣ್ಣ, ನಿಕಟ ಪೂರ್ವ ಅಧ್ಯಕ್ಷರಾದ ಮಂಜುನಾಥ್ ಮೃಗವದೆ ಯವರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ವಲಯ ಭಜನೋತ್ಸವ ಹಾಗೂ ತಾಲೂಕು ಭಜನೋತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ತಾಲೂಕು ಪರಿಷತ್ತಿನಿಂದ ಭಜನಾ ಮಂಡಳಿ ಗೆ ಏಕ ಸಮವಸ್ತ್ರ ಜಾರಿ ಮಾಡುವ ಬಗ್ಗೆ ಚರ್ಚಿಸಲಾಯಿತು.

ತಾಲೂಕಿನ ಉಪಾಧ್ಯಕ್ಷರಾದ ವೆಂಕಟರಮಣರವರು ಪ್ರಾರ್ಥನೆ ಗೈದರು, ತೀರ್ಥಹಳ್ಳಿ ತಾಲೂಕಿನ ವಲಯ ಸಂಯೋಜಕಿ ಶ್ರೀಮತಿ ಜ್ಯೋತಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಎಲ್ಲಾ ವಲಯ ಸಂಯೋಜಕರು ಕಾರ್ಯದರ್ಶಿಗಳು ಭಜನಾ ತಂಡಗಳ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಗುಡ್ಡೆ ಕೊಪದ ಸಂಯೋಜಕರಾದ ಶ್ರೀಮತಿ ಶುಭ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.






