ವಿಟ್ಲ : ವಿಟ್ಲ ಸಮೀಪದ ಕನ್ಯಾನದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮಹಿಳೆಯೊಬ್ಬರು ಕೊನೆಯುಸಿರೆಳೆದ ದಾರುಣ ಘಟನೆ ಬೆಳಕಿಗೆ ಬಂದಿದೆ.


ಕನ್ಯಾನದ ಅಂಗಿ ಮನೆ ನಿವಾಸಿ ಗೀತಾ (29) ಮೃತಪಟ್ಟ ಮಹಿಳೆ.

ಮಾಹಿತಿಯ ಪ್ರಕಾರ, ಗೀತಾ ಅವರು ಹಠಾತ್ತಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ.






