ಬೆಳ್ತಂಗಡಿ : ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆನ್ಸ್ ಕ್ಲಬ್ ಜತೆಯಾಗಿ ಉಜಿರೆಯ ಹಿರಿಯ ಛಾಯಾಗ್ರಾಹಕ, ಮಂಗಳಾ ಸ್ಟುಡಿಯೊ ಮಾಲಕ ಎ.ಸೋಮಶೇಖರ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಶ್ರೀಧರ ಕೆ.ವಿ, ರೊ.ಪ್ರಶಾಂತ ಜೈನ್, ಆನ್ಸ್ ಕ್ಲಬ್ ಅಧ್ಯಕ್ಷೆ ಆನ್ ರಾಜಶ್ರೀ ಧನಂಜಯ ರಾವ್, ಕಾರ್ಯದರ್ಶಿ ಆನ್ ಅಪರ್ಣಾ ವಾಟ್ವೆ, ಆನ್ ಸ್ಮಿತಾ ಜೈನ್, ಆನ್ ಪುನೀತಾ ಉಪಸ್ಥಿತರಿದ್ದರು.








