ಬೆಳ್ತಂಗಡಿ: ಶ್ರೀ ಸತ್ಯನಾರಾಯಣ ಭಜನಾ ಮಂದಿರ ನಿಡಿಗಲ್ ಇಲ್ಲಿ ಭಜಕರ ಕನಸಿನ ಹೆಜ್ಜೆ ಬೆಳ್ತಂಗಡಿ ತಾಲೂಕು ಇವರ ನೇತೃತ್ವದಲ್ಲಿ ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವಾದ “ಭಜಕರ ಸಮ್ಮಿಲನ 2026” ಎನ್ನುವ ವಿಭಿನ್ನ ಶೈಲಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಬೇಬಿ ಉಮೇಶ್ ಗುರಿಪಳ್ಳ ವಹಿಸಿಕೊಂಡಿದ್ದರು ಪೂರ್ವಾಹ್ನ 10:00 ಗಂಟೆಗೆ ಸರಿಯಾಗಿ ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ನೆರವೇರಿಸಿ ಮಾತಾಡಿದ ಶ್ರೀ.ಕೆ ಮೋಹನ್ ಕುಮಾರ್ ಸಮಾಜದಲ್ಲಿ ಬದಲಾವಣೆ ತರಲು ತುಂಬಾ ದೊಡ್ಡ ರೀತಿಯಲ್ಲಿ ಎಷ್ಟೋ ಭಜನಾ ಮಂಡಳಿಗಳು ಮತ್ತು ಭಜನಾ ಕ್ಷೇತ್ರದ ಭಜಕ ಮಕ್ಕಳು ಪ್ರಯತ್ನಿಸುತ್ತಿದ್ದಾರೆ ಹಾಗೆಯೇ ಇಂತಹ ಸಂಘಟನೆಗಳ ಪೂರ್ಣ ಬೆಂಬಲ ಅಂತಹ ಭಜಕರಿಗೆ ಸಿಕ್ಕಾಗ ಅವರು ಇನ್ನಷ್ಟು ಸಮಾಜದಲ್ಲಿ ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಎನ್ನಲು ನಮಗೆಲ್ಲ ಖುಷಿಯಿದೆ.

ಭಜನಾ ಮಕ್ಕಳನ್ನು ಕೇವಲ ಭಜನಾ ಶಿಕ್ಷಣ ಕೊಡಿಸಿ ಸಮಾಜಕ್ಕೆ ಅರ್ಪಿಸುವುದು ಗುರುವಿನ ಕೆಲಸವಲ್ಲ ಬದಲಾಗಿ ಒಳ್ಳೆಯ ರೀತಿಯ ಸಂಸ್ಕಾರವನ್ನು ಅವರಿಗೆ ಧಾರೆ ಏರೆದು ಅವರನ್ನು ಸಮಾಜದ ಸತ್ಪ್ರಜೆಯನ್ನಾಗಿ ಮಾಡುವುದೇ ಗುರುವಿನ ಮೊದಲ ಕೆಲಸ ಮತ್ತು ಆದ್ಯತೆ. ಅಂತಹ ಕೆಲಸದಲ್ಲಿ ಅದೆಷ್ಟೋ ಭಜನಾ ಗುರುಗಳು ಅವಿರತವಾಗಿ ಈ ಒಂದು ಕೆಲಸ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ ಮತ್ತು ಈ ಒಂದು ಸಂಘಟನೆಯು ಕೇವಲ ಭಜನೆ ಮಾತ್ರವಲ್ಲದೆ ಭಜನಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಸಮಸ್ಯೆ ಅಥವಾ ಯಾವುದೇ ಭಜಕರಿಗೂ ಸಮಸ್ಯೆ ಉಂಟಾದಲ್ಲಿ ತಕ್ಷಣ ಅವರ ನೆರವಿಗೆ ನಿಂತು ಅವರ ಕಷ್ಟಕಾಲದಲ್ಲಿ ನೆರವಾಗುವ ಮೂಲ ಉದ್ದೇಶವನ್ನು ಇಟ್ಟುಕೊಂಡು ಈ ಒಂದು ಸಂಘಟನೆ ಸಮಾಜದಲ್ಲಿ ಮುಂದುವರಿಯುತಿದೆ.
ಮುಂದೆಯೂ ಇಂತಹ ಸಂಘಟನೆಗಳ ಮುಖಾಂತರ ಸಮಾಜದಲ್ಲಿ ಇನ್ನಷ್ಟು ಒಳ್ಳೆಯ ಕಾರ್ಯಗಳು ನೆರವೇರಲಿ,ಈ ಸಂಘಟನೆಯ ಕಾರ್ಯಕ್ಕೆ ಸಂಪೂರ್ಣ ನಮ್ಮ ಬೆಂಬಲ ಇರುತ್ತದೆ ಎನ್ನುವಂತಹ ವಿಶ್ವಾಸ ನಿಯ ಮಾತನ್ನು ತಿಳಿಸಿದರು. ಹಾಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತಹ ಪ್ರಸಾದ್ ಬಿ.ಎಸ್ ಇವರು ಮಾತನಾಡಿ ಸಮಾಜದಲ್ಲಿ ಒಂದೊಳ್ಳೆಯ ಸ್ಥಾನಮಾನ ಗಳಿಸಲು ಶಿಕ್ಷಣ ಹೇಗೆ ಮುಖ್ಯವೋ ಹಾಗೆ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳನ್ನು ತನ್ನಲ್ಲಿ ಮೈಗೂಡಿಸಿಕೊಳ್ಳಲು ಭಜನಾ ಶಿಕ್ಷಣವು ಕೂಡ ಅತ್ಯಗತ್ಯವಾಗಿದೆ ಎನ್ನುತ್ತಾ ತಮ್ಮ ಈ ಒಂದು ಚಿಕ್ಕ ಕಾರ್ಯಕ್ರಮವಾದರೂ ಇಷ್ಟು ದೊಡ್ಡ ಮಟ್ಟದಲ್ಲಿ ಭಜನಾ ಕ್ಷೇತ್ರದ ಭಜಕರು ಸೇರಿರುವುದು ನಮಗೆಲ್ಲ ತುಂಬಾ ಸಂತಸ ತಂದಿದೆ. ನಿಮ್ಮ ಕಾರ್ಯವು ಇನ್ನಷ್ಟು ಸಮಾಜಮುಖಿಯಾಗಿ ಸಾಗಲಿ ಎನ್ನುತ್ತಾ ನಮ್ಮ ಸಂಪೂರ್ಣ ಸಹಕಾರc ಸಂಘಟನೆಗೆ ಸದಾ ಇದ್ದೇ ಇರುತ್ತದೆ ಎಂದರು.
ಮುಂದಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಜಯಂತಗೌಡ ಗುರಿಪಳ್ಳ ಇವರು ಮಾತನಾಡಿ ಸಮಾಜದಲ್ಲಿ ಎಷ್ಟೋ ಜನ ದುಶ್ಚಟಗಳಿಗೆ ಬಲಿಯಾಗುತ್ತಿರುವ ಈ ಸಮಯದಲ್ಲಿ ಕೆಲವೊಂದು ಕಡೆ ಭಜನಾ ಶಿಕ್ಷಣ ಪಡೆದ ಮಕ್ಕಳು ಸನಾತನ ಸಂಸ್ಕೃತಿಯ ಸನ್ಮಾರ್ಗದ ಹಾದಿಯಲ್ಲಿ ಸಾಗುತ್ತಿರುವುದು ತುಂಬಾ ಒಳ್ಳೆಯ ವಿಷಯ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಂತರ ಮಾತನಾಡಿದ ಜಯಶ್ರೀ ಪ್ರಕಾಶ್ ಗೌಡ ಅಪ್ರಮೇಯ ಇವರು ಒಂದು ಕಾಲದಲ್ಲಿ ತಾಲೂಕು ಮತ್ತು ಜಿಲ್ಲೆಗಳಲ್ಲಿ ಕೇವಲ ತುಂಬಾ ಬೆರಳಣಿಕೆ ಭಜನಾ ತಂಡಗಳು ಇಂತಹ ಕೆಲಸಗಳನ್ನು ಮಾಡುತ್ತಿದ್ದವು, ಆದರೆ ಈಗ ಕಾಲ ತುಂಬ ಬದಲಾಗಿದೆ ಏನೆಂದರೆ ಒಂದು ಗ್ರಾಮದಲ್ಲಿ ನಾಲ್ಕರಿಂದ ಐದು ಭಜನಾ ಮಂಡಳಿಗಳು ಹಾಗೆಯೇ ತಾಲೂಕು ಮಾತ್ರವಲ್ಲದೆ ಜಿಲ್ಲೆಗಳಲ್ಲಿಯೂ ಕೂಡ ಅದೆಷ್ಟೋ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಅದೆಷ್ಟೋ ಸಮಾಜಮುಖಿಯಾದ ಬದಲಾವಣೆಯನ್ನು ತರುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಯಶೋಧರ ಕೆ ಯೋಜನಾಧಿಕಾರಿ ಶ್ರೀ ಧ.ಗ್ರಾಂ.ಯೋ ಇವರು ಮಾತನಾಡಿ ಮನುಷ್ಯನ ಜೀವನದಲ್ಲಿ ಕೇವಲ ವಿದ್ಯೆ ಮತ್ತು ಶಿಕ್ಷಣ ಮುಖ್ಯವಲ್ಲ ಬದಲಾಗಿ ಸನಾತನ ಸಂಸ್ಕೃತಿಯ ಭಜನಾ ಶಿಕ್ಷಣವು ಅತ್ಯಗತ್ಯ ಎಂದು ಈಗಿನ ಪ್ರಚಲಿತ ಸನ್ನಿವೇಶಗಳಲ್ಲಿ ಅದೆಷ್ಟೋ ಬಾರಿ ನಮ್ಮ ಸಮಾಜದ ಜನರಿಗೆ ಕಾಣಸಿಗುತ್ತಿದೆ. ಕಾರಣ ಏನೆಂದರೆ ಈಗಿನ ಕಾಲದ ಮಕ್ಕಳು ಅನಗತ್ಯ ಚಟುವಟಿಕೆಗಳಾದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಅದರಲ್ಲಿ ತೊಡಗಿಸಿ ಕೊಂಡು ಸಮಾಜದಲ್ಲಿ ಅನೇಕ ರೀತಿಯ ತೊಂದರೆ ತಾಪತ್ರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಭಜನಾ ಶಿಕ್ಷಣ ಪಡೆದ ಮಕ್ಕಳು ಎಂದು ಕೂಡ ಯಾವುದೇ ರೀತಿಯಲ್ಲೂ ಯಾವುದೇ ತಪ್ಪುದಾರಿ ಹಿಡಿಯುವುದಿಲ್ಲ ಎನ್ನುವುದಕ್ಕೆ ಭಜನಾ ಕ್ಷೇತ್ರವೇ ಒಂದು ಮೂಲ ಉದಾಹರಣೆ. ಎನ್ನುತ್ತಾ
ನಂತರ ಮಾತನಾಡಿದ ಸ್ವರ್ಣಲತಾ ರಂಗ ನೂರಿತ್ತಾಯ ಇವರು ಮಕ್ಕಳಿಗೆ ಕೇವಲ ಜೀವನದಲ್ಲಿ ತಂದೆ ತಾಯಿ ಯಾವ ರೀತಿಯ ಶಿಕ್ಷಣವನ್ನು ಸಮಾಜದಲ್ಲಿ ಬದುಕಲು ನೀಡುತ್ತಾರೋ ಅದೇ ಶಿಕ್ಷಣವನ್ನು ಭಜನಾ ಕ್ಷೇತ್ರದಲ್ಲಿಯೂ ಕೂಡ ಸನಾತನವಾಗಿ ಧರ್ಮ ಶಿಕ್ಷಣದ ಮುಖಾಂತರ ಮಕ್ಕಳನ್ನು ತಯಾರುಮಾಡಿ ದೇಶದ ಮತ್ತು ಸಮಾಜದ ಒಂದೊಳ್ಳೆಯ ಸತ್ಪ್ರಜೆಯನ್ನಾಗಿ ಮಾಡುವಂತ ಅತಿ ದೊಡ್ಡ ಕೆಲಸವೂ ಈಗ ಭಜನಾ ಕ್ಷೇತ್ರದಲ್ಲಿ ಹೇರಳವಾಗಿ ನಡೆಯುತ್ತಿದೆ. ಸಮಾಜದಲ್ಲಿ ಅದೆಷ್ಟೋ ಸಂಘ ಸಂಸ್ಥೆಗಳು ತನ್ನದೇ ಆದಂತಹ ಕೆಲಸ ಕಾರ್ಯಗಳನ್ನು ದೀನದಲಿತರ ಶ್ರೇಯೋಭಿವೃದ್ಧಿಗೆ ಮಾಡುತ್ತಾ ಬರುತ್ತಿದೆ. ಅದೇ ಮಜಲಿನಲ್ಲಿ ಈ ಒಂದು ಸಂಘಟನೆ ಕೂಡ ಭಜನಾ ಕ್ಷೇತ್ರದ ಭಜಕ ಬಂಧುಗಳ ಕಷ್ಟಕಾಲದಲ್ಲಿ ನೆರವಾಗುವ ದೃಷ್ಟಿಯಿಂದ ಇಂತಹ ಅನೇಕ ಸೇವಾ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿದೆ ಮುಂದೆಯೂ ಮಾಡುತ್ತದೆ ಎನ್ನುವಂತಹ ನಂಬಿಕೆಯಲ್ಲಿ ನಮ್ಮ ಸಂಪೂರ್ಣ ಸಹಕಾರ ಇಂತಹ ಸಂಘಟನೆಯ ಮೇಲೆ ಸದಾ ಇದ್ದೇ ಇರುತ್ತದೆ ಎನ್ನುವಂತಹ ವಿಶ್ವಾಸನೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುನಾಥ ಶೆಟ್ಟಿ ನಿಡಿಗಲ್ ಸಂತೋಷ್ ಹೆಗ್ಗೆ ಕಲ್ಮಂಜ ಅಧ್ಯಕ್ಷರು ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್, ಹಾಗೆಯೇ ಗೌರವ ಉಪಸ್ಥಿತಿ ನೆಲೆಯಲ್ಲಿ ರಾಜೇಶ್ವರಿ ಬಿ.ಎಸ್ ನಿವೃತ್ತ ಶಿಕ್ಷಕರು ಮತ್ತು ಮೋನಪ್ಪ.ಟಿ ಟ್ರಸ್ಟ್ ಕಾರ್ಯದರ್ಶಿಗಳು.

ಮತ್ತು ಶ್ರೀ ನಾರಾಯಣ ಅಧ್ಯಕ್ಷರು ಛತ್ರಪತಿ ಶಿವಾಜಿ ಭಜನಾ ಮಂಡಳಿ ಉಜಿರೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಭಜನಾ ಮಂಡಳಿಗಳ ಭಜಕ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತವಾಯಿತು. ಮಧ್ಯಾಹ್ನ ಸೇರಿದಂತಹ ಎಲ್ಲಾ ಭಜನಾ ಬಂಧುಗಳಿಗೂ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೆಯೇ ಆಗಮಿಸಿದ ಎಲ್ಲಾ ಬಜಕ ಬಂಧುಗಳಿಗೂ ಆಟೋಟ ಸ್ಪರ್ಧೆಗಳನ್ನು ಏರ್ಪಾಡಿಸಲಾಗಿತ್ತು ಹಾಗೆಯೇ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪುಸ್ತಕ ನೀಡುವುದರ ಮೂಲಕ ಪ್ರೋತ್ಸಾಹ ಮಾಡಲಾಯಿತು ಒಟ್ಟು ಈ ಒಂದು ಕಾರ್ಯಕ್ರಮದಲ್ಲಿ 150ಕ್ಕೂ ಮಿಕ್ಕಿ ಬಜಕ ಬಂಧುಗಳು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ, ನಮ್ಮ ಈ ಒಂದು ಕಾರ್ಯಕ್ರಮವು ಅತ್ಯಂತ ಒಳ್ಳೆಯ ರೀತಿಯಲ್ಲಿ ಯಶಸ್ವಿಯಾಗಲು ಕಾರಣಕರ್ತರಾದರು..





