ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಮುಂಡತ್ತೋಡಿ ಶ್ರೀಮತಿ ಶಾರದಾ ಇವರ ಗದ್ದೆಯಲ್ಲಿ ಕೆಸರಡೊಂಜಿ ದಿನ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟವನ್ನು ಉಜಿರೆ ವರ್ತಕರ ಸಂಘದ ಅಧ್ಯಕ್ಷರಾದ ಪ್ರಸಾದ್ ಬಿ ಎಸ್ ಗದ್ದೆಗೆ ಪೂಜೆ ಮಾಡಿ ಹಾಲು ಹಾಕಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಗದ್ದೆಗೆ ಪವಿತ್ರವಾದ ಸ್ಥಾನವಿದೆ.
ವಿದ್ಯಾರ್ಥಿಗಳಿಗೆ ಈ ಮಣ್ಣಿನ ಸೊಗಡು ಮತ್ತು ಸಂಸ್ಕೃತಿ ತಿಳಿಸುವ ಇಂತಹ ಕ್ರೀಡಾ ಕೂಟವನ್ನು ಎನ್ ಎಸ್ ಎಸ್ ಘಟಕ ಆಯೋಜನೆ ಮಾಡಿರುವುದು ಅರ್ಥಪೂರ್ಣವಾದುದು “ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ “ನಮ್ಮ ತುಳುನಾಡ ಸಂಸ್ಕೃತಿಯನ್ನು ಉಳಿಸುವಲ್ಲಿ ಕೆಸರುಡೊಂಜಿ ದಿನ ಕ್ರೀಡಾಕೂಟವು ಬಹಳ ಮಹತ್ತರವಾದುದು. ಬದಲಾಗುತ್ತಿರುವ ಯುವ ಜನಾಂಗಕ್ಕೆಇಂತಹ ಕ್ರೀಡಾಕೂಟಗಳ ಮೂಲಕ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಸಾಧ್ಯ”ಎಂದು ಹೇಳಿದರು.

ಗದ್ದೆಯ ಮಾಲಕಿ ಶ್ರೀಮತಿ ಶಾರದಾರವರ ಮಗಳು ಶ್ರೀಮತಿ ಪೂಜಾ ದೇವರಾಜ್ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಪೂಜಾರಿ, ಸ್ಥಳೀಯರಾದ ಪವಿತ್ರ,ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಭಿಜ್ಞಾ, ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶ್ರೀಮತಿ ಶೋಭಾ ಪಿ,ಉಪಸ್ಥಿತರಿದ್ದರು.
ಸ್ವಯಂ ಸೇವಕರಿಗೆ ಕೆಸರು ಗದ್ದೆ ಓಟ, ಹಾಳೆ ಓಟ, ವಾಲಿಬಾಲ್, ಥ್ರೋ ಬಾಲ್, ಕಂಬ ಸುತ್ತುವ ಓಟ,ಹಗ್ಗ ಜಗ್ಗಾಟ,ನಿಧಿ ಶೋಧ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು.

ಸ್ವಯಂ ಸೇವಕಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಸುಪೇಕ್ಷಾ ಸ್ವಾಗತಿಸಿ, ಶ್ರೇಯಸ್ ವಂದಿಸಿದರು.





