ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆಯಲ್ಲಿರುವ ವಿ.ವಿ. ಟವರ್ ನಲ್ಲಿ ‘ವಿ.ವಿ. ಗ್ರೀನ್ ಸೋಲಾರ್ ಸೊಲ್ಯೂಷನ್’ ಸಂಸ್ಥೆಯ ನೂತನ ಮಳಿಗೆಯು ಸೆಪ್ಟೆಂಬರ್ 19 ರಂದು ಶುಭಾರಂಭಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ – ಕನಸಿನ ಮನೆ ಸಂಸ್ಥೆಯ ಮಾಲಕರಾದ ಶ್ರೀ ಕೆ. ಮೋಹನ್ ಕುಮಾರ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ, ಸಂಸ್ಥೆಯ ಬೆಳವಣಿಗೆಗೆ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ತೋಟತ್ತಾಡಿ ಸೈಂಟ್ ಆಂತೋನಿ ಫೋರೆನ್ ಚರ್ಚ್ ನ ಅಧ್ಯಕ್ಷರಾದ ರೆವರೆಂಡ್ ಫಾದರ್ ಸಬಾಸ್ಟಿನ್ ಅವರು ಉಪಸ್ಥಿತರಿದ್ದು ಆಶೀರ್ವಚನ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ವರ್ಜಿನ್ ಸೋಲರ್ ಕಂಪನಿಯ ಕರ್ನಾಟಕ ಮುಖ್ಯಸ್ಥರಾದ ಶ್ರೀ ಜಾರ್ಜ್ ಡ್ಯಾನಿಯೇಲ್, ದಕ್ಷಿಣ ಕನ್ನಡ ವಲಯದ ಬ್ಯಾಂಕ್ ಡೈರೆಕ್ಟರ್ ಶ್ರೀ ಜಯಕರ್ ಸೋನ್ಸ್, ಮಾಂಡೋವಿ ಮೋಟರ್ಸ್ ಚಾರ್ಮಾಡಿ ಶಾಖೆಯ ಮ್ಯಾನೇಜರ್ ಶ್ರೀ ಚರಣ್, ವರ್ಜಿನ್ ಸೋಲರ್ ಸೊಲ್ಯೂಷನ್ಸ್ ಏರಿಯಾ ಸೇಲ್ಸ್ ಮ್ಯಾನೇಜರ್ ಶ್ರೀ ಶ್ರೇಯಸ್ ಹಾಗೂ V & V ಮಾರುತಿ ಸರ್ವಿಸ್ ಸ್ಟೇಷನ್ ಮಾಲಕರಾದ ಶ್ರೀ ಬಾಬುರಾಜ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.





