ಕಾಶಿಪಟ್ಣ: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ಶ್ರೀ ಶಾರದಾ ದೇವಿಯ ವಿಗ್ರಹ ಮುಹೂರ್ತ ಕಾರ್ಯಕ್ರಮವು ಸೆಪ್ಟೆಂಬರ್ 20ರಂದು ಭಕ್ತಿ-ಶ್ರದ್ಧೆಯಿಂದ ಜರುಗಿತು.
ದೇವಿಯ ವಿಗ್ರಹ ರಚನೆಗೆ ಮುಹೂರ್ತ ನೆರವೇರಿಸುವ ಈ ಶುಭ ಸಂದರ್ಭದಲ್ಲಿ ಸಮಿತಿಯ ಗೌರವ ಪದಾಧಿಕಾರಿಗಳು, ಪೂಜಾ ಸಮಿತಿಯ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದು ಪ್ರಾರ್ಥನೆ ಸಲ್ಲಿಸಿದರು.