ಬೆಂಗಳೂರು: ಬೆಂಗಳೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿ ಪುರವ್ ಎಂಬ ಬಾಲಕ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡಲು ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುರವ್, ಸೆಪ್ಟೆಂಬರ್ 24, 2026 ರಂದು ಕಾಣೆಯಾಗಿದ್ದಾನೆ. ಈತ ಬೆಂಗಳೂರಿನ ಹೆಬ್ಬಾಳದ ನಾಗೇನಹಳ್ಳಿ ಪ್ರದೇಶದಿಂದ ಕಾಣೆಯಾಗಿದ್ದಾನೆ.

ಪುರವ್ ಆರ್.ಟಿ. ನಗರದ ಆರ್.ಟಿ. ನಗರ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸುಮಾರು 6.2 ಅಡಿ ಎತ್ತರ ಹೊಂದಿದ್ದಾನೆ.

ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ ಅಥವಾ ಎಲ್ಲಾದರೂ ಕಂಡುಬಂದರೆ, ತಕ್ಷಣ ಅವರ ಕುಟುಂಬದ ಮೊಬೈಲ್ ಸಂಖ್ಯೆ 9844019446 ಅನ್ನು ಸಂಪರ್ಕಿಸಲು ಕೋರಲಾಗಿದೆ. ಮಗನನ್ನು ಸುರಕ್ಷಿತವಾಗಿ ಮನೆಗೆ ಸೇರಿಸಲು ಈ ಸುದ್ದಿಯನ್ನು ಆದಷ್ಟು ಶೇರ್ ಮಾಡಿ ಸಹಾಯ ಮಾಡಿ.





